Thursday, January 23, 2025

”ದೇಶದಲ್ಲಿ ಇರ್ಬೇಕಂದ್ರೆ ನಾವ್ ಹೇಳ್ದಂಗೆ ಕೇಳ್ಬೇಕು, ಹಿಂದೂಗಳು ಖಡ್ಗ ಹಿಡಿದ್ರೆ ಸರಿ ಇರಲ್ಲ” : ಬಿಜೆಪಿ ಶಾಸಕ

ಬಳ್ಳಾರಿ : ”ದೇಶದಲ್ಲಿ ಇರ್ಬೇಕಂದ್ರೆ ನಾವ್ ಹೇಳ್ದಂಗೆ ಕೇಳ್ಬೇಕು, ಹಿಂದೂಗಳು ಖಡ್ಗ ಹಿಡಿದ್ರೆ ಸರಿ ಇರಲ್ಲ” ಅಂತ ಬಿಜೆಪಿ ಶಾಸಕ ಸೋಮಶೇಖರ ರೆಡ್ಡಿ ಧಮ್ಕಿ ಹಾಕಿದ್ದಾರೆ.
ನಗರದಲ್ಲಿ ನಡೆದ ಸಿಎಎ ಸ್ವಾಗತ ಸಮಾವೇಶದಲ್ಲಿ ಮಾತನಾಡಿದ ಅವರು, ”ದೇಶದಲ್ಲಿ ಇರ್ಬೇಕು ಅಂದ್ರೆ ನಾವು ಹೇಳ್ದಂಗೆ ಕೇಳ್ಬೇಕು. ಇದು ನಮ್ಮ ದೇಶ, ಮೈಮೇಲೆ ಎಚ್ಚರ ಇಟ್ಟುಕೊಂಡಿರಬೇಕು. ಏನಾದ್ರೂ ನಖರಾ ಮಾಡಿದ್ರೆ, ನಿಮ್ಮ ಸ್ಥಿತಿ ಸರಿ ಇರಲ್ಲ” ಅಂತ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
“ಇದು ನಮ್ಮ ದೇಶ, ನಾವು ಶೇ. 80ರಷ್ಟಿದ್ದೇವೆ. ನೀವಿರೋದು ಬರೀ 5% ಮಾತ್ರ. ನಾವೆಲ್ಲಾ ಸೇರಿ ಉಫ್‌ ಅಂತಾ ಊದಿದ್ರೆ, ಹಾರಿ ಹೋಗ್ತೀರ. ನಿಮಗೆ ಪಾಕಿಸ್ತಾನ, ಬಾಂಗ್ಲಾದೇಶ ಹುಳ ಕಡಿತೈತಾ? ನಮ್ಮ ಹೃದಯ ಕಿತ್ರೆ, ಅಮಿತ್ ಶಾ, ಮೋದಿ ಕಾಣ್ತಾರೆ. ಎರಡು ಬಾರಿ ಮೋದಿ ಪ್ರಧಾನಿ ಆದ್ರು ಅಂತ ನಿಮಗೆ ಹೊಟ್ಟೆಕಿಚ್ಚಾ?” ಎಂದರು.
“ನಾವು ಎಲ್ಲಿದ್ರೂ ಭಾರತ ಮಾತೆಯ ಪುತ್ರರು, ಭಕ್ತರು ನಾವು. ನಮ್ಮ ದೇಶದಲ್ಲಿ ಇರಬೇಕು ಅಂದ್ರೆ, ನಾವು ಹೇಳಿದಂಗೆ ಕೇಳಬೇಕು. ಪೌರತ್ವ ವಿರೋಧಿಗಳನ್ನು ಶೂಟ್ ಮಾಡಿದ್ರೆ ಒಳ್ಳೇದಾಗಿರೋದು. ಸಂಸದ ತೇಜಸ್ವಿ ಸೂರ್ಯ ಹೇಳಿಕೆ ನಿಜವಾಗಿದೆ. ಹಿಂದೂಗಳು ಖಡ್ಗ ಹಿಡ್ಕೊಂಡು ದುರ್ಗಮ್ಮನ ದರ್ಶನ ಪಡ್ಕೊಂಡು ಬಂದ್ರೆ ಕಷ್ಟ. ನೀವು ಮುಸ್ಲಿಂರು 12 ಜನಕ್ಕೆ ಜನ್ಮ ನೀಡಿದ್ರೆ, ನಾವು 50 ಜನಕ್ಕೆ ಜನ್ಮ ಕೊಡ್ತೇವೆ” ಅಂತ ವಾಗ್ದಾಳಿ ನಡೆಸಿದರು.

RELATED ARTICLES

Related Articles

TRENDING ARTICLES