Monday, November 18, 2024

ವಿಂಡೀಸ್ ವಿರುದ್ಧ ಭಾರತಕ್ಕೆ ಸತತ 10 ನೇ ಸರಣಿ ಜಯ..!

ಕಟಕ್‌: ಬೃಹತ್‌ ಮೊತ್ತದ ರನ್‌ ಚೇಸಿಂಗ್‌ನ ಅಂತ್ಯಕ್ಕೆ ಸ್ಟಾರ್‌ ಬ್ಯಾಟ್ಸ್‌ಮನ್‌ಗಳು ಇಲ್ಲದೇ ಇದ್ದರೂ ಭಾರತ ವೆಸ್ಟ್ ಇಂಡೀಸ್ ಅನ್ನು 4 ವಿಕೆಟ್‌ಗಳಿಂದ ಮಣಿಸಿ, 3 ಪಂದ್ಯಗಳ ಏಕದಿನ ಕ್ರಿಕೆಟ್‌ ಸರಣಿಯಲ್ಲಿ 2-1 ಅಂತರದ ಜಯ ಗಳಿಸಿದೆ.
ಕಟಕ್​ನ ಬಾರಬತಿ ಕ್ರೀಡಾಂಗಣದಲ್ಲಿ ನಡೆದ ಸರಣಿಯ ಕೊನೆಯ ಪಂದ್ಯದಲ್ಲಿ ಟೀಮ್ ಇಂಡಿಯಾ ನಾಯಕ ವಿರಾಟ್‌ ಕೊಹ್ಲಿ ಟಾಸ್‌ ಗೆದ್ದು ಮೊದಲು ಫೀಲ್ಡಿಂಗ್‌ ಆಯ್ಕೆ ಮಾಡಿಕೊಂಡರು. ನಿಗದಿತ 50 ಓವರ್‌ಗಳಲ್ಲಿ ವೆಸ್ಟ್‌ ಇಂಡೀಸ್‌ 5 ವಿಕೆಟ್‌ಗೆ 315 ರನ್‌ಗಳ ಬೃಹತ್ ಮೊತ್ತ ದಾಖಲಿಸಿತು.

ಬಳಿಕ ಗುರಿ ಬೆನ್ನತ್ತಿದ ಭಾರತ ರೋಹಿತ್‌ ಶರ್ಮಾ (63), ಕೆಎಲ್‌ ರಾಹುಲ್‌ (77) ಮತ್ತು ಕ್ಯಾಪ್ಟನ್‌ ವಿರಾಟ್‌ ಕೊಹ್ಲಿ (85) ಅರ್ಧಶತಕಗಳು ಹಾಗೂ ಇನಿಂಗ್ಸ್‌ ಅಂತ್ಯದಲ್ಲಿ ಆಲ್‌ರೌಂಡರ್‌ ರವೀಂದ್ರ ಜಡೇಜಾ (ಅಜೇಯ 39) ಮತ್ತು ಶಾರ್ದುಲ್‌ ಠಾಕೂರ್‌ (ಅಜೇಯ 17) ಜವಾಬ್ದಾರಿಯುತ ಬ್ಯಾಟಿಂಗ್‌ ಮೂಲಕ ತಂಡವನ್ನು ಜಯದ ದಡ ಮುಟ್ಟಿಸಿದರು. 48.4 ಓವರ್‌ಗಳಲ್ಲಿ 6 ವಿಕೆಟ್‌ಗೆ ಭಾರತ 316 ರನ್‌ ಗಳಿಸಿ ಜಯ ತನ್ನದಾಗಿಸಿಕೊಂಡಿತು. ಈ ಮೂಲಕ ಒಡಿಐನಲ್ಲಿ ವೆಸ್ಟ್ ಇಂಡೀಸ್‌ ವಿರುದ್ಧ ಸತತ 10ನೇ ಸರಣಿ ಗೆದ್ದು ಬೀಗಿತು.

RELATED ARTICLES

Related Articles

TRENDING ARTICLES