Monday, December 23, 2024

ಮಿಸ್ ಆಗಿದೆಯಂತೆ 8 ಕೋಟಿ ರೂಪಾಯಿ ನಾಯಿ…!

ಬೆಂಗಳೂರು : ಸಿಲಿಕಾನ್​ ಸಿಟಿ ಬೆಂಗಳೂರಿನಲ್ಲಿ 8 ಕೋಟಿ ರೂಪಾಯಿ ಮೌಲ್ಯದ ನಾಯಿಯೊಂದು ಕಳುವಾಗಿದ್ದು , ಹುಡುಕಿಕೊಟ್ಟವರಿಗೆ ಮಾಲೀಕರು ಭರ್ಜರಿ ಬಹುಮಾನವನ್ನು ಘೋಷಿಸಿದ್ದಾರೆ.
ಬೆಂಗಳೂರಿನ ಸೆಲೆಬ್ರಿಟಿ ಡಾಗ್​ ಬ್ರೀಡರ್​ ಸತೀಶ್​ ಅವರು ಎರಡು ವರ್ಷಗಳ ಹಿಂದೆ ಚೀನಾದಿಂದ 8 ಕೋಟಿ ರೂಪಾಯಿ ಪಾವತಿಸಿ ಅಲಸ್ಕನ್​ ಮುಲಮುಟೆ ತಳಿಯ ನಾಯಿಯನ್ನು ಆಮದು ಮಾಡಿಕೊಂಡಿದ್ರು.
ಇದೀಗ ಬೆಂಗಳೂರಿನ ಶ್ರೀನಗರದ ಅವರ ನಿವಾಸದಿಂದ ಆ ನಾಯಿ ಕಳುವಾಗಿದ್ದು, ಹುಡುಕಿ ಕೊಟ್ಟವರಿಗೆ 1 ಲಕ್ಷ ರುಪಾಯಿ ಬಹುಮಾನವನ್ನು ಅವರು ಘೋಷಿಸಿದ್ದಾರೆ.
ಕೆಂಬಣ್ಣ ಹಾಗೂ ಬಿಳಿ ಮಿಶ್ರಿತವಾದ ಬಣ್ಣ ಈ ನಾಯಿ ಹೊಂದಿದ್ದು. ಸದ್ಯ ನಾಯಿ ಕಳುವಾಗಿರುವ ಬಗ್ಗೆ ಹನುಮಂತನಗರ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಾಗಿದೆ

RELATED ARTICLES

Related Articles

TRENDING ARTICLES