Monday, December 23, 2024

ನಾನಿನ್ನೂ ಬದುಕಿದ್ದೇನೆ ಅಂತ ಗುಡುಗಿದ್ದೇಕೆ ಡಿಕೆಶಿ?

ಬೆಂಗಳೂರು : ನಾನಿನ್ನು ಸತ್ತಿಲ್ಲ , ಬದುಕ್ಕಿದ್ದೇನೆ . ಇಂದಿರಾ ಕ್ಯಾಂಟೀನ್ ಹೆಸರನ್ನು ಬದಲಿಸಲು ಯಾವುದೇ ಕಾರಣಕ್ಕೂ ಬಿಡುವುದಿಲ್ಲ, ಎಂದು ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಎಚ್ಚರಿಕೆ ನೀಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ನಾಯಕರಿಗೆ ಎಚ್ಚರಿಕೆ ನೀಡುತ್ತಿದ್ದೇವೆ . ಇಂದಿರಾವ ಗಾಂಧಿ ದೇಶದ ಆಸ್ತಿ. ಭಾವನಾತ್ಮಕ ವಿಷಯವಾಗಿರುವ ಅವರ ಹೆಸರನ್ನು ಮುಟ್ಟಲು ಹೋಗಬೇಡಿ. ಯಾವುದೇ ಕಾರಣಕ್ಕೂ ಇಂದಿರಾ ಕ್ಯಾಂಟೀನ್ ಹೆಸರನ್ನು ತೆಗೆಯಲು ನಾನು ಅವಕಾಶ ನೀಡುವುದಿಲ್ಲ ಎಂದು ಹೇಳಿದ್ದಾರೆ.  

RELATED ARTICLES

Related Articles

TRENDING ARTICLES