Monday, December 23, 2024

ಹಿಟ್​ಮ್ಯಾನ್​ ರೋಹಿತ್​ ಶರ್ಮಾ, ಕನ್ನಡಿಗ ರಾಹುಲ್ ಸೆಂಚುರಿ

ವಿಶಾಖಪಟ್ಟಣ : ಹಿಟ್​​ಮ್ಯಾನ್ ರೋಹಿತ್ ಶರ್ಮಾ ಮತ್ತು ಕನ್ನಡಿಗ ಕೆ.ಎಲ್ ರಾಹುಲ್ ಅಜೇಯ ಸೆಂಚುರಿ ಸಿಡಿಸಿ ತಮ್ಮ ಬ್ಯಾಟಿಂಗ್ ಮುಂದುವರೆಸಿದ್ದಾರೆ.
ವೆಸ್ಟ್​ ಇಂಡೀಸ್​ ವಿರುದ್ಧ ನಡೆಯುತ್ತಿರುವ 2ನೇ ಒಡಿಐನಲ್ಲಿ ರೋಹಿತ್ ಮತ್ತು ರಾಹುಲ್ ವಿಕೆಟ್ ನಷ್ಟವಿಲ್ಲದೆ ತಂಡವನ್ನು ಬೃಹತ್ ಮೊತ್ತದತ್ತ ಕೊಂಡೊಯ್ಯುತ್ತಿದ್ದಾರೆ. ಆರಂಭಿಕರಾಗಿ ಕಣಕ್ಕಿಳಿದಿರುವ ರಾಹುಲ್ ಮತ್ತು ರೋಹಿತ್ ಬೇರ್ಪಡಿಸಲು ಕೆರಬಿಯನ್ನರು ಪರದಾಡುತ್ತಿದ್ದಾರೆ. ರೋಹಿತ್ ಒಡಿಐನ 28ನೇ ಹಾಗೂ ರಾಹುಲ್ 3ನೇ ಸೆಂಚುರಿ ಸಿಡಿಸಿ ಅಬ್ಬರಿಸುತ್ತಿದ್ದಾರೆ.
ಸದ್ಯ ರೋಹಿತ್ ಶರ್ಮಾ 114 ಹಾಗೂ ರಾಹುಲ್ 102ರನ್ ಗಳಿಸಿ ಬ್ಯಾಟಿಂಗ್ ನಡೆಸುತ್ತಿದ್ದಾರೆ. ತಂಡದ ಮೊತ್ತ 226ರನ್​ಗಳಾಗಿದ್ದು, ವಿಕೆಟ್ ನಷ್ಟವಿಲ್ಲದೆ ಬೃಹತ್ ಮೊತ್ತದತ್ತ ದಾಪುಗಾಲು ಇಟ್ಟಿದೆ. 

RELATED ARTICLES

Related Articles

TRENDING ARTICLES