Sunday, January 19, 2025

ಬಾಲಕನ ಪಾಲಿಗೆ ಬಸ್ ಚಾಲಕನೇ ಯಮನಾದ!

ಬೆಂಗಳೂರು : ಶಾಲಾ ಬಸ್​ ಹರಿದು ಬಾಲಕನೊಬ್ಬ ಮೃತಪಟ್ಟ ಘಟನೆ ಬೆಂಗಳೂರು ಹೊರವಲಯದ ಆನೆಕಲ್​ವ್ಯಾಪ್ತಿಯಲ್ಲಿ  ನಡೆದಿದೆ. ಕಮ್ಮಸಂದ್ರದ ಸೆಂಟ್ ಪೀಟರ್ಸ್ ಇಂಗ್ಲಿಷ್ ಶಾಲೆಯ ಎಲ್​​ಕೆಜಿ ವಿದ್ಯಾರ್ಥಿ  ದೀಕ್ಷಿತ್​ ಮೃತ ದುರ್ದೈವಿ.

ಶಾಲಾ ಬಸ್​ನಿಂದ ಎಡಭಾಗದಲ್ಲಿ ನಡೆದುಕೊಂಡು ಹೋಗುತ್ತಿರುವುದನ್ನು ಗಮನಿಸದ ಚಾಲಕ ಬಸ್ಸನ್ನು ಎಡಕ್ಕೆ ತಿರುಗಿಸಿದ್ದಾನೆ, ಈ ಸಂದರ್ಭದಲ್ಲಿ ದೀಕ್ಷಿತ್ ಬಸ್ಸಿನಡಿಗೆ ಸಿಲುಕಿ, ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಚಾಲಕನ ಅಜಾಗರೂಕತೆಯಿಂದ ಬಾಲಕ ಸಾವನ್ನಪ್ಪಿದ್ದು, ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಹೆಬ್ಬಗೋಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

 

RELATED ARTICLES

Related Articles

TRENDING ARTICLES