Sunday, December 22, 2024

ಮೈಸೂರು- ಬೆಂಗಳೂರು ರೈಲು ಪ್ರಯಾಣಿಕರಿಗೆ ಹೊಸ ಗಿಫ್ಟ್ !

ಬೆಂಗಳೂರು : ಬೆಂಗಳೂರು – ಮೈಸೂರಿನ ನಡುವಿನ ಸಂರ್ಪಕವನ್ನು ಉತ್ತಮ ಪಡಿಸಿ, ಪ್ರಯಾಣಿಕರಿಗೆ ಅನುಕೂಲ ಕಲ್ಪಿಸಲು ನೈರುತ್ಯ ರೈಲ್ವೆ ಸಿಹಿಸುದ್ದಿ ನೀಡಿದೆ.

ಇಂದಿನಿಂದ ಮೈಸೂರು-ಬೆಂಗಳೂರು- ಯಲಹಂಕ ನಡುವೆ ಮೆಮು ರೈಲು ಸೇವೆಯನ್ನು ಆರಂಭಿಲಾಗುತ್ತಿದೆ. ಈ ಮೂಲಕ ಕ್ರಿಸ್ಮಸ್ ಹಬ್ಬಕ್ಕೆ ಬೆಂಗಳೂರು – ಮೈಸೂರು ರೈಲು ಪ್ರಯಾಣಿಕರಿಗೆ ದೊಡ್ಡ ಗಿಪ್ಟ್ ಸಿಕ್ಕಂತಾಗಿದೆ. 

ದಿನ ರಾತ್ರಿ ಮೈಸೂರಿನಿಂದ 10.20ಕ್ಕೆ ಹೊರಡುವ ರೈಲು 1.30ಕ್ಕೆ ಬೆಂಗಳೂರಿನ ಯಲಹಂಕ ತಲುಪಲಿದೆ. ಮುಂಜಾನೆ 2.30ಕ್ಕೆ ಯಲಹಂಕದಿಂದ ಹೊರಡುವ ರೈಲು ಮುಂಜಾನೆ 5.35ಕ್ಕೆ ಮೈಸೂರು ತಲುಪಲಿದೆ. ಈ ಮೆಮು ರೈಲು ಮಂಡ್ಯ, ಕೆಂಗೇರಿ , ಬೆಂಗಳೂರು ,ಯಶವಂತಪುರದಲ್ಲಿ ಮಾತ್ರ ನಿಲುಗಡೆಯಾಗಲಿದೆ. ಮೈಸೂರಿನಿಂದ ಇಂದು ಈ ಸೇವೆ ಆರಂಭವಾಗಿದ್ದು , ಸಂಸದ ಪ್ರತಾಪ್ ಸಿಂಹ ಚಾಲನೆ ನೀಡಿದ್ದಾರೆ.

RELATED ARTICLES

Related Articles

TRENDING ARTICLES