Wednesday, January 22, 2025

ಮನುಷ್ಯತ್ವ ಮುಖ್ಯ ರಾಜಕೀಯವಲ್ಲ ..!

ಬೆಂಗಳೂರು : ಹೃದಯ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದ ಮಾಜಿ ಸಿಎಂ ಸಿದ್ದರಾಮಯ್ಯ ಇಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ . ಇದಕ್ಕೂ ಮೊದಲು ಮಾಧ್ಯಮಗಳೊಂದಿಗೆ ಮಾತನಾಡಿ ವೈದ್ಯರಾದ ಡಾ.ರಮೇಶ್, ಡಾ.ನಾರಯಣಸ್ವಾಮಿ ಹಾಗೂ ಎಲ್ಲ ಸಿಬ್ಬಂದಿ ವರ್ಗಕ್ಕೆ ಧನ್ಯವಾದ ತಿಳಿಸಿದ್ರು .

ನಾನು ‘ಫುಲ್ ಫಿಟ್ ಅಂಡ್ ಫೈನ್’ ಆರೋಗ್ಯವಾಗಿದ್ದೇನೆ. ಮೊದಲಿನಂತೆ ಕೆಲಸ ಮಾಡಬಹುದು ಎಂದು ತಿಳಿಸಿದ್ರು . ಅಲ್ಲದೆ ಆಸ್ಪತ್ರೆಯಲ್ಲಿದ್ದಾಗ ಪಕ್ಷಾತೀತವಾಗಿ ಬಂದು ಎಲ್ಲ ನಾಯಕರು ಆರೋಗ್ಯ ವಿಚಾರಿಸಿದ್ರು. ರಾಜಕಾರಣದಲ್ಲಿ ಯಾರು ಶತ್ರುಗಳಲ್ಲ ಶಾಶ್ವತ ಮಿತ್ರರು ಅಲ್ಲ. ರಾಜಕೀಯಕ್ಕಿಂತ ಮನುಷ್ಯತ್ವ ಮುಖ್ಯ ಎಂದು ಹೇಳುವ ಮೂಲಕ ಎಲ್ಲರಿಗೂ ಧನ್ಯವಾದ ಎಂದು ಹೇಳಿದ್ದಾರೆ.

RELATED ARTICLES

Related Articles

TRENDING ARTICLES