Monday, December 23, 2024

ಬರಲಿದೆ ಮನೋಹರ್ ಪರಿಕ್ಕರ್ ಬಯೋಪಿಕ್

ಗೋವಾ: ಸದ್ಯ ಸಿನಿಮಾ ಜಗತ್ತಿನಲ್ಲಿ ಈಗ ಬಯೋಪಿಕ್​​ಗಳದ್ದೇ ಸದ್ದು , ಕ್ರಿಕೆಟ್ ದಿಗ್ಗಜರು ರಾಜಕೀಯ ನಾಯಕರ ಜೀವನಾಧಾರಿತ ಚಿತ್ರಗಳನ್ನು ಮಾಡುವ ಕಡೆ ಸಿನಿ ಮಂದಿ ಗಮನ ಹರಿಸಿದ್ದಾರೆ.

ಈಗಾಗಲೇ ತಮಿಳುನಾಡು ಮಾಜಿ ಸಿ ಎಂ ದಿವಂಗತ ಜಯಲಲಿತಾ ಬಯೋಪಿಕ್ ಮಾಡಲು ಹಲವು ನಿರ್ದೇಶಕರು ಮುಂದಾಗಿದ್ದಾರೆ. ಅದ್ರಲ್ಲಿ ಬಾಲಿವುಡ್ ಕ್ವೀನ್ ಕಂಗನಾ, ಜಯಲಲಿತಾ ಪಾತ್ರ ಮಾಡುತ್ತಿರುವುದು ಎಲ್ಲರಿಗೂ ಗೊತ್ತೇ ಇದೆ. ಇದೀಗ ಲೇಟೆಸ್ಟ್ ನ್ಯೂಸ್ ಅಂದ್ರೆ ಮತ್ತೊಬ್ಬ ರಾಜಕೀಯ ಬಯೋಪಿಕ್ ನಿರ್ಮಾಣವಾಗುತ್ತಿದೆ.

ಮಾಜಿ ಕೇಂದ್ರ ಸಚಿವ, ಗೋವಾ ಮಾಜಿ ಸಿಎಂ ದಿ.ಮನೋಹರ್ ಪರಿಕ್ಕರ್ ಜೀವನಾಧಾರಿತ ಸಿನಿಮಾ ಮಾಡಲು ಗಾಲಿವುಡ್ ಪ್ರೊಡಕ್ಷನ್ ಹೌಸ್ ಮುಂದಾಗಿದೆ. ಚಿತ್ರಕ್ಕೆ ಪರಿಕ್ಕರ್ ಪುತ್ರ ಉತ್ಪಲ್ ಹಾಗೂ ಕುಟುಂಬದಿಂದ ಗ್ರೀನ್ ಸಿಗ್ನಲ್ ಸಿಕ್ಕಿದ್ದು, ಸಿನಿಮಾ ಸದ್ಯದಲ್ಲೇ ಟೇಕಾಫ್ ಆಗಲಿದೆ. ಈ ಬಗ್ಗೆ ನಿರ್ಮಾಪಕ ಸ್ವಪ್ನಿಲ್ ಶೇಟ್ಕರ್, 3 ವರ್ಷದ ಹಿಂದೆಯೇ ಚಿತ್ರ ಮಾಡಬೇಕಿತ್ತು. ಕಾರಣಾಂತರಗಳಿಂದ ಆಗಿರ್ಲಿಲ್ಲ. ಈಗ ಕಾಲ ಕೂಡಿ ಬಂದಿದೆ. ಪರಿಕ್ಕರ್ ಅವರ ಬಾಲ್ಯ, ಪಾಲಿಟಿಕ್ಸ್, ಹಾಗೂ ಸಾಧನೆ ಕುರಿತಾಗಿ ಚಿತ್ರ ಮಾಡುತ್ತೇವೆ ಎಂದಿದ್ದಾರೆ .

ಈ ಸಿನಿಮಾ ಹಿಂದಿ ಹಾಗೂ ಕೊಂಕಣಿ ಭಾಷೆಯಲ್ಲಿ ನಿರ್ಮಾಣವಾಗಲಿದ್ದು, 2020 ಡಿ.13 ರಂದು ಪರಿಕ್ಕರ್ ಜನ್ಮದಿನದಂದು ರಿಲೀಸ್ ಆಗಲಿದೆ.

RELATED ARTICLES

Related Articles

TRENDING ARTICLES