Thursday, January 23, 2025

ಕುತೂಹಲ ಮೂಡಿಸಿದ ಶರತ್ ಬಚ್ಚೇಗೌಡ ನಡೆ !

ಕೋಲಾರ : ಹೊಸಕೋಟೆಯ ನೂತನ ಪಕ್ಷೇತರ ಶಾಸಕ ಶರತ್ ಬಚ್ಚೇಗೌಡ ಅವರು ಮಾಜಿ  ಸ್ಪೀಕರ್ ರಮೇಶ್ ಕುಮಾರ್ ಮನೆಗೆ ಭೇಟಿ ನೀಡಿ ಅಶೀರ್ವಾದ ಪಡೆದಿರುವುದು ಕುತೂಹಲಕ್ಕೆ ಕಾರಣವಾಗಿದೆ .

ರಮೇಶ್ ಕುಮಾರ್ ನಿವಾಸಕ್ಕೆ ಮುಖಂಡರೊಂದಿಗೆ ಭೇಟಿ ನೀಡಿದ ಶರತ್ ಬಚ್ಚೇಗೌಡ,  ಸುಮಾರು ಅರ್ಧಗಂಟೆಗೂ ಹೆಚ್ಚು ಕಾಲ ರಹಸ್ಯವಾಗಿ ಮಾತುಕತೆ ನಡೆಸಿರುವುದು, ಎಲ್ಲರ ಹುಬ್ಬೆರುವಂತೆ ಮಾಡಿದೆ. ಶರತ್ ಬಚ್ಚೇಗೌಡ ಕಾಂಗ್ರೆಸ್ ಕದ ಬಡಿಯುತ್ತಿದ್ದಾರೆ ಎನ್ನುವ  ಗುಸು ಗುಸು ಶುರುವಾಗಿದೆ.

ಬಿಜೆಪಿಗೆ ಸೆಡ್ಡು ಹೊಡೆದು ಪಕ್ಷೇತರವಾಗಿ ಸ್ಪರ್ಧಿಸಿ ಗೆದ್ದಿರುವ ಶರತ್​ಗೆ, ಬಿಜೆಪಿ ಬಾಗಿಲು ಬಂದ್ ಆಗಿದೆ. ಆದ್ದರಿಂದ ಮುಂದಿನ ರಾಜಕೀಯ ದಾರಿಯನ್ನು ಕಂಡುಕೊಳ್ಳಲು ಸಿದ್ದರಾಮಯ್ಯ ಆಪ್ತರಾಗಿರುವ ರಮೇಶ್ ಕುಮಾರ್ ಮೂಲಕ ಕಾಂಗ್ರೆಸ್ ಸೇರುವ ಬಗ್ಗೆ ಚರ್ಚಿಸಿದ್ದಾರೆ. 

RELATED ARTICLES

Related Articles

TRENDING ARTICLES