Monday, December 23, 2024

ವಿಜಯೇಂದ್ರಗೆ ‘ ಅಮಿತ್ ಶಾ ‘ ಬುಲಾವ್..!

ಬೆಂಗಳೂರು : ಕೆ.ಆರ್. ಪೇಟೆ ಬೈ ಎಲೆಕ್ಷನ್​​​​ನಲ್ಲಿ ದಳಪತಿಗಳ ಕೋಟೆಯನ್ನು ಛಿದ್ರ ಮಾಡಿ ಮಂಡ್ಯದಲ್ಲಿ ಕಮಲ ಅರಳುವಂತೆ ಮಾಡಿದ ಬಿಜೆಪಿ ಪ್ರಧಾನ ಕಾರ್ಯದರ್ಶಿ ಬಿ.ವೈ.ವಿಜಯೇಂದ್ರ ಅವರನ್ನು ದೆಹಲಿಗೆ ಬರುವಂತೆ ಅಮಿತ್ ಶಾ ಆಹ್ವಾನಿಸಿದ್ದಾರೆ.

ಕೆ.ಆರ್.ಪೇಟೆ ಉಪ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಜಯಗಳಿಸಿತ್ತು, ಈ ಗೆಲುವಿನ ಹಿಂದೆ ವಿಜಯೇಂದ್ರ ಅವರು ಪ್ರಮುಖ ಪಾತ್ರವಹಿಸಿದ್ರು . ಚುನಾವಣೆ  ಘೋಷಣೆಯಾದ ಬಳಿಕ ಕ್ಷೇತ್ರದಲ್ಲೆ ಮೊಕ್ಕಾಂ  ಹೂಡಿ ಗೆಲುವಿನ ರಣತಂತ್ರ ರೂಪಿಸಿದ್ದರು. ಹೀಗಾಗಿ ಈ ಕ್ಷೇತ್ರ ಬಿಜೆಪಿ ತೆಕ್ಕೆಗೆ ಬರಲು ಕಾರಣವಾಯಿತು . ಈ ಅಭೂತಪೂರ್ವ ಗೆಲುವಿನ  ಬಳಿಕ,  ಚರ್ಚೆ ನಡೆಸಲು ಅಮಿತ್ ಶಾ ವಿಜಯೇಂದ್ರಗೆ ಆಹ್ವಾನ ನೀಡಿದ್ದಾರೆ ಎಂಬ ಮಾಹಿತಿ ದೊರೆತಿದೆ.

 ಇಂದು ಸಂಜೆ ವಿಜಯೇಂದ್ರ ದೆಹಲಿಗೆ ಪ್ರಯಾಣ ಬೆಳೆಸಿ ಅಮಿತ್ ಶಾ ಅವರನ್ನು ಭೇಟಿ ಮಾಡಲಿದ್ದಾರೆ ಎಂದು ತಿಳಿದುಬಂದಿದೆ .

RELATED ARTICLES

Related Articles

TRENDING ARTICLES