Monday, October 28, 2024

ಬೈ ಎಲೆಕ್ಷನ್ ರಿಸಲ್ಟ್ : ಅರ್ಹತಾ ಪರೀಕ್ಷೆಯಲ್ಲಿ ಯಾರು ಪಾಸ್? ಯಾರು ಫೇಲ್? ಇಲ್ಲಿದೆ ಕ್ಷಣ ಕ್ಷಣದ ಅಪ್​ಡೇಟ್ಸ್

ಬೆಂಗಳೂರು : ಭಾರೀ ಕುತೂಹಲ ಮೂಡಿಸಿರುವ ರಾಜ್ಯದ 15 ವಿಧಾನಭಾ ಕ್ಷೇತ್ರಗಳ ಉಪಚುನಾವಣೆಯ ಫಲಿತಾಂಶಕ್ಕೆ ಕ್ಷಣಗಣನೆ ಶುರುವಾಗಿದೆ. ರಾಜೀನಾಮೆ ನೀಡುವ ಮೂಲಕ ಮೈತ್ರಿ ಸರ್ಕಾರದ ಪತನಕ್ಕೆ ಕಾರಣರಾಗಿ, ಸ್ಪೀಕರ್ ಮತ್ತು ಸುಪ್ರೀಂಕೋರ್ಟಿಂದಲೂ ಅನರ್ಹತೆ ಶಿಕ್ಷೆಗೆ ಗುರಿಯಾಗಿರುವ ಶಾಸಕರ ಮತ್ತು ಬಿ.ಎಸ್ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರದ ಭವಿಷ್ಯ ಇಂದು ಹೊರ ಬೀಳಲಿರುವ ಪ್ರಜಾ ತೀರ್ಪಲ್ಲಿ ಅಡಗಿದೆ.
15 ಕ್ಷೇತ್ರಗಳ ಮತ ಎಣಿಕೆಯ ಕ್ಷಣ ಕ್ಷಣದ ಅಪ್​ಡೇಟ್ಸ್ ಇಲ್ಲಿದೆ.

ಎಂಟಿಬಿ ಕೋಟೆ ಭೇದಿಸಿದ ಶರತ್ ಬಚ್ಚೇಗೌಡ!

ಯಶವಂತಪುರದಲ್ಲಿ ಅರಳಿದ ಕಮಲ – ಸೋಮಶೇಖರ್​ ಗೆಲುವಿನ ಕೇಕೆ

ವಿಜಯನಗರದಲ್ಲಿ ಆನಂದ್ ಸಿಂಗ್ ಕಿಂಗ್

ಶಿವಾಜಿನಗರದಲ್ಲಿ ರಿಜ್ವಾನ್ ವಿರಾಜಮಾನ

ರಾಣೆಬೆನ್ನೂರಲ್ಲಿ ಉದಯಿಸಿದ `ಅರುಣ’..!

ಸೋದರರ ಸವಾಲಲ್ಲಿ ರಮೇಶ್ ಜಾರಕಿಹೊಳಿಗೆ ಗೆಲುವು

ಕಾಗವಾಡ ಬಿಜೆಪಿ ತೆಕ್ಕೆಗೆ ; ಶ್ರೀಮಂತ್ ಪಾಟೀಲ್​ಗೆ ಗೆಲುವು

ಕೆ.ಆರ್​​ ಪುರಂನಲ್ಲಿ ಭೈರತಿ ಬಸವರಾಜ್ ಪರ ಪ್ರಜಾತೀರ್ಪು

ಅಥಣಿಯಲ್ಲಿ ಅರ್ಹತಾ ಪರೀಕ್ಷೆ ಪಾಸ್​ ಆದ ಮಹೇಶ್ ಕುಮಟಳ್ಳಿ

ಜೆಡಿಎಸ್ ಭದ್ರಕೋಟೆಯಲ್ಲಿ ಕಮಲ ಕಿಲಕಿಲ!

ಬಿಜೆಪಿಗೆ ಒಲಿದ ‘ಮಹಾಲಕ್ಷ್ಮೀ’

ಹುಣಸೂರಲ್ಲಿ ಮಂಜುನಾಥ್ ಪರ ಪ್ರಜಾತೀರ್ಪು ; ವಿಶ್ವನಾಥ್​ಗೆ ಮುಖಭಂಗ

ಚಿಕ್ಕಾಬಳ್ಳಾಪುರದಲ್ಲಿ ಡಾ. ಸುಧಾಕರ್​ಗೆ ಜಯಕಾರ

ಬಿ.ಸಿ ಪಾಟೀಲ್​​ಗೆ ಜೈ ಎಂದ ಹಿರೇಕೆರೂರು ಮತದಾರರು

ಗೆಲುವಿನ ಖಾತೆ ತೆರೆದ ಬಿಜೆಪಿ : ಯಲ್ಲಾಪುರದಲ್ಲಿ ಶಿವರಾಮ್​ ಹೆಬ್ಬಾರ್​ ಭರ್ಜರಿ ಗೆಲುವು

 

ಯಶವಂತಪುರ : 

ಯಶವಂತಪುರದಲ್ಲಿ ಅರಳಿದ ಕಮಲ – ಸೋಮಶೇಖರ್​ ಗೆಲುವಿನ ಕೇಕೆ

ಅಭ್ಯರ್ಥಿಗಳು : ಎಸ್​ ಟಿ ಸೋಮಶೇಖರ್ (ಬಿಜೆಪಿ), ಪಿ. ನಾಗರಾಜ್ (ಕಾಂಗ್ರೆಸ್), ಜವರಾಯಿಗೌಡ (ಜೆಡಿಎಸ್)

ಜೆಡಿಎಸ್ ಅಭ್ಯರ್ಥಿ ಜವರಾಯಿಗೌಡಗೆ 2091 ಮತಗಳ ಮುನ್ನಡೆ

ಜೆಡಿಎಸ್​ ಅಭ್ಯರ್ಥಿಗೆ 8130 ಮತಗಳು, ಬಿಜೆಪಿ ಅಭ್ಯರ್ಥಿಗೆ 4909 ಮತಗಳು

ಜೆಡಿಎಸ್​ನ ಜವರಾಯಿಗೌಡಗೆ 2221 ಮತಗಳ ಮುನ್ನಡೆ

ಜೆಡಿಎಸ್​ನ ಜವರಾಯಿಗೌಡಗೆ ಮುನ್ನಡೆ0.0.0.0.0.0.0.

ಬಿಜೆಪಿ ಅಭ್ಯರ್ಥಿ ಎಸ್​ ಟಿ ಸೋಮಶೇಖರ್​ಗೆ ಮುನ್ನಡೆ.

ಬೆಳಗ್ಗೆ 8 ಗಂಟೆ ಮತ ಎಣಿಕೆ ಆರಂಭ

ಕೆ.ಆರ್ ಪುರ : 

ಕೆ.ಆರ್​​ ಪುರಂನಲ್ಲಿ ಭೈರತಿ ಬಸವರಾಜ್ ಪರ ಪ್ರಜಾತೀರ್ಪು

ಅಭ್ಯರ್ಥಿಗಳು : ಭೈರತಿ ಬಸವರಾಜ್ (ಬಿಜೆಪಿ), ಎಂ ನಾರಾಯಣಸ್ವಾಮಿ (ಕಾಂಗ್ರೆಸ್),ಸಿ.ಕೃಷ್ಣಮೂರ್ತಿ (ಜೆಡಿಎಸ್)

ಬಿಜೆಪಿ ಅಭ್ಯರ್ಥಿ ಭೈರತಿ ಬಸವರಾಜ್​ಗೆ  3962 ಮತಗಳ ಮುನ್ನಡೆ.

ಬಿಜೆಪಿ ಅಭ್ಯರ್ಥಿ ಭೈರತಿ ಬಸವರಾಜ್​ಗೆ ಮುನ್ನಡೆ.

ಬೆಳಗ್ಗೆ 8 ಗಂಟೆ ಮತ ಎಣಿಕೆ ಆರಂಭ

ಮಹಾಲಕ್ಷ್ಮಿ ಲೇಔಟ್ : 

ಬಿಜೆಪಿ ಅಭ್ಯರ್ಥಿ ಕೆ. ಗೋಪಾಲಯ್ಯಗೆ ಗೆಲುವು

ಅಭ್ಯರ್ಥಿಗಳು : ಕೆ.ಗೋಪಾಲಯ್ಯ (ಬಿಜೆಪಿ), ಎಂ.ಶಿವರಾಜ್ (ಕಾಂಗ್ರೆಸ್), ಡಾ.ಗಿರೀಶ್ ನಾಶಿ (ಜೆಡಿಎಸ್)

ಮುನ್ನಡೆ ಕಾಯ್ದುಕೊಂಡು ಗೋಪಾಲಯ್ಯ

ಬಿಜೆಪಿ ಅಭ್ಯರ್ಥಿ ಗೋಪಾಲಯ್ಯ ಅವರಿಗೆ ಮುನ್ನಡೆ.

ಬೆಳಗ್ಗೆ 8 ಗಂಟೆ ಮತ ಎಣಿಕೆ ಆರಂಭ

ಹುಣಸೂರು : 

ಹುಣಸೂರಲ್ಲಿ ಮಂಜುನಾಥ್ ಪರ ಪ್ರಜಾತೀರ್ಪು ; ವಿಶ್ವನಾಥ್​ಗೆ ಮುಖಭಂಗ 

ಅಭ್ಯರ್ಥಿಗಳು : ಹೆಚ್.ವಿಶ್ವನಾಥ್ (ಬಿಜೆಪಿ), ಹೆಚ್.ಪಿ ಮಂಜುನಾಥ್ (ಕಾಂಗ್ರೆಸ್),ಸೋಮಶೇಖರ್ (ಜೆಡಿಎಸ್)

ಕಾಂಗ್ರೆಸ್ ಅಭ್ಯರ್ಥಿ ಮಂಜುನಾಥ್​ಗೆ 12,350 ಮತಗಳ ಮುನ್ನಡೆ. ಸೋಲಿನ ಭೀತಿಯಲ್ಲಿ ಹೆಚ್.ವಿಶ್ವನಾಥ್​

ಕಾಂಗ್ರೆಸ್ ಅಭ್ಯರ್ಥಿ ಮಂಜುನಾಥ್​ಗೆ 4008 ಮತಗಳ ಮುನ್ನಡೆ.

ಕಾಂಗ್ರೆಸ್ ಅಭ್ಯರ್ಥಿ ಮಂಜುನಾಥ್​ಗೆ 2,800 ಮತಗಳ ಮುನ್ನಡೆ.

ಕಾಂಗ್ರೆಸ್ ಅಭ್ಯರ್ಥಿ ಮಂಜುನಾಥ್​ಗೆ 858 ಮತಗಳ ಮುನ್ನಡೆ.

ಕಾಂಗ್ರೆಸ್ ಅಭ್ಯರ್ಥಿ ಮಂಜುನಾಥ್​ಗೆ ಮುನ್ನಡೆ.

ಬಿಜೆಪಿ ವಿಶ್ವನಾಥ್​ಗೆ ಮುನ್ನಡೆ.

ಕಾಂಗ್ರೆಸ್ ಅಭ್ಯರ್ಥಿ ಮಂಜುನಾಥ್​ಗೆ ಮುನ್ನಡೆ.

ಹುಣಸೂರಲ್ಲಿ ಹಾವು – ಏಣಿ ಆಟ – ಬಿಜೆಪಿ ವಿಶ್ವನಾಥ್ , ಕಾಂಗ್ರೆಸ್​ ಮಂಜುನಾಥ್​ ನಡುವೆ ಬಿಗ್ ಫೈಟ್

ಬೆಳಗ್ಗೆ 8 ಗಂಟೆ ಮತ ಎಣಿಕೆ ಆರಂಭ

ಚಿಕ್ಕಬಳ್ಳಾಪುರ : 

ಬಿಜೆಪಿ ಅಭ್ಯರ್ಥಿ ಡಾ.ಸುಧಾಕರ್​​ಗೆ ಗೆಲುವು

ಅಭ್ಯರ್ಥಿಗಳು : ಡಾ.ಸುಧಾಕರ್ (ಬಿಜೆಪಿ), ಎಂ ಆಂಜನಪ್ಪ (ಕಾಂಗ್ರೆಸ್),ರಾಧಾಕೃಷ್ಣ (ಜೆಡಿಎಸ್)

ಬಿಜೆಪಿ ಅಭ್ಯರ್ಥಿ ಡಾ.ಸುಧಾಕರ್​​ಗೆ  3274 ಮತಗಳ ಮುನ್ನಡೆ

ಬಿಜೆಪಿ ಅಭ್ಯರ್ಥಿಗೆ 1023 ಮತಗಳ ಮುನ್ನಡೆ

ಬಿಜೆಪಿ ಅಭ್ಯರ್ಥಿ ಡಾ. ಸುಧಾಕರ್ ಮುನ್ನಡೆ.

ಬೆಳಗ್ಗೆ 8 ಗಂಟೆ ಮತ ಎಣಿಕೆ ಆರಂಭ

ಅಥಣಿ : 

ಅಥಣಿಯಲ್ಲಿ ಅರ್ಹತಾ ಪರೀಕ್ಷೆ ಪಾಸ್​ ಆದ ಮಹೇಶ್ ಕುಮಟಳ್ಳಿ

ಅಭ್ಯರ್ಥಿಗಳು : ಮಹೇಶ್ ಕುಮಟಳ್ಳಿ (ಬಿಜೆಪಿ),ಗಜಾನನ ಮಂಗಸೂಳೆ (ಕಾಂಗ್ರೆಸ್)

ಬಿಜೆಪಿ ಅಭ್ಯರ್ಥಿ ಮಹೇಶ್ ಕುಮಟಹಳ್ಳಿಗೆ 4027 ಮತಗಳ ಮುನ್ನೆಡೆ.

ಬಿಜೆಪಿ ಅಭ್ಯರ್ಥಿ ಮಹೇಶ್ ಕುಮಟಹಳ್ಳಿ ಮುನ್ನೆಡೆ.

ಬೆಳಗ್ಗೆ 8 ಗಂಟೆ ಮತ ಎಣಿಕೆ ಆರಂಭ

ಯಲ್ಲಾಪುರ : 

ಬಿಜೆಪಿ ಅಭ್ಯರ್ಥಿ ಶಿವರಾಮ್ ಹೆಬ್ಬಾರ್​ಗೆ 31, 406 ಮತಗಳ ಅಂತರದ ಭರ್ಜರಿ ಗೆಲುವು

ಅಭ್ಯರ್ಥಿಗಳು : ಶಿವರಾಮ್ ಹೆಬ್ಬಾರ್ (ಬಿಜೆಪಿ),ಭೀಮಣ್ಣ ನಾಯ್ಕ್​ (ಕಾಂಗ್ರೆಸ್), ಎ.ಚೈತ್ರಾಗೌಡ (ಜೆಡಿಎಸ್)

ಶಿವರಾಮ್ ಹೆಬ್ಬಾರ್​ಗೆ 12,335 ಮತಗಳ ಭಾರೀ ಮುನ್ನಡೆ

122 ಮತಗಳು ನೋಟಾಗೆ!

2264 ಮತಗಳ ಅಂತರದಲ್ಲಿ ಮುನ್ನಡೆ ಕಾಯ್ದುಕೊಂಡ ಶಿವರಾಮ್ ಹೆಬ್ಬಾರ್

ಬಿಜೆಪಿ ಅಭ್ಯರ್ಥಿ ಶಿವರಾಮ್ ಹೆಬ್ಬಾರ್​ಗೆ ಮುನ್ನಡೆ.

ಬೆಳಗ್ಗೆ 8 ಗಂಟೆ ಮತ ಎಣಿಕೆ ಆರಂಭ

ವಿಜಯನಗರ : 

ವಿಜಯನಗರದಲ್ಲಿ ಆನಂದ್ ಸಿಂಗ್ ಕಿಂಗ್

ಅಭ್ಯರ್ಥಿಗಳು : ಆನಂದ್​ ಸಿಂಗ್ (ಬಿಜೆಪಿ),ವೆಂಕಟರಾವ್​​ ಘೋರ್ಪಡೆ​ (ಕಾಂಗ್ರೆಸ್), ಎಂ ಎನ್ ನಬಿ (ಜೆಡಿಎಸ್)

ಆನಂದ್​ ಸಿಂಗ್​ ಗೆ 3263 ಮತಗಳ ಮುನ್ನಡೆ

* ಬಿಜೆಪಿಯ ಆನಂದ್​ ಸಿಂಗ್​ಗೆ ಮುನ್ನಡೆ

* ಅಂಚೆ ಮತಎಣಿಕೆ ಆರಂಭಗೊಂಡಿದ್ದು, ಬಿಜೆಪಿ ಅಭ್ಯರ್ಥಿ ಆನಂದ್ ಸಿಂಗ್ ಮುನ್ನಡೆ ಪಡೆದಿದ್ದಾರೆ.

ಬೆಳಗ್ಗೆ 8 ಗಂಟೆ ಮತ ಎಣಿಕೆ ಆರಂಭ

ಗೋಕಾಕ್ : 

ಸೋದರರ ಸವಾಲಲ್ಲಿ ರಮೇಶ್ ಜಾರಕಿಹೊಳಿಗೆ ಗೆಲುವು

ಅಭ್ಯರ್ಥಿಗಳು : ರಮೇಶ್ ಜಾರಕಿಹೊಳಿ (ಬಿಜೆಪಿ),ಲಖನ್​ ಜಾರಕಿಹೊಳಿ​ (ಕಾಂಗ್ರೆಸ್), ಅಶೋಕ್ ಪೂಜಾರಿ (ಜೆಡಿಎಸ್)

ಬಿಜೆಪಿಮ ಅಭ್ಯರ್ಥಿ ರಮೇಶ್ ಜಾರಕಿಹೊಳಿಗೆ 20124 ಮತಗಳ ಮುನ್ನಡೆ

* ಸೋದರ ಸವಾಲಲ್ಲಿ ರಮೇಶ್ ಜಾರಕಿಹೊಳಿಗೆ 2000 ಮತಗಳ ಮುನ್ನಡೆ.

  • ರಮೇಶ್ ಜಾರಕಿಹೊಳಿಗೆ ಮುನ್ನಡೆ.

ಬೆಳಗ್ಗೆ 8 ಗಂಟೆ ಮತ ಎಣಿಕೆ ಆರಂಭ

ಕಾಗವಾಡ : 

ಕಾಗವಾಡ ಬಿಜೆಪಿ ತೆಕ್ಕೆಗೆ ; ಶ್ರೀಮಂತ್ ಪಾಟೀಲ್​ಗೆ ಗೆಲುವು

ಅಭ್ಯರ್ಥಿಗಳು : ಶ್ರೀಮಂತ್ ಪಾಟೀಲ್ (ಬಿಜೆಪಿ),ರಾಜು ಕಾಗೆ​ (ಕಾಂಗ್ರೆಸ್), ಶ್ರೀಶೈಲ ತುಗಶೆಟ್ಟಿ(ಜೆಡಿಎಸ್)

ಬಿಜೆಪಿ ಅಭ್ಯರ್ಥಿ ಶ್ರೀಮಂತ್ ಪಾಟೀಲ್​ಗೆ 4078 ಮತಗಳ ಮುನ್ನಡೆ.

ಮುನ್ನಡೆ ಕಾಯ್ದುಕೊಂಡ ಬಿಜೆಪಿ ಅಭ್ಯರ್ಥಿ ಶ್ರೀಮಂತ್ ಪಾಟೀಲ್

ಬಿಜೆಪಿ ಅಭ್ಯರ್ಥಿ ಶ್ರೀಮಂತ್ ಪಾಟೀಲ್​ಗೆ ಮುನ್ನಡೆ.

ಕಾಂಗ್ರೆಸ್​ನ ರಾಜುಕಾಗೆಗೆ ಮುನ್ನಡೆ.

ಬೆಳಗ್ಗೆ 8 ಗಂಟೆ ಮತ ಎಣಿಕೆ ಆರಂಭ

ಹೊಸಕೋಟೆ : 

ಎಂಟಿಬಿ ಕೋಟೆ ಭೇದಿಸಿದ ಶರತ್ ಬಚ್ಚೇಗೌಡ!

ಅಭ್ಯರ್ಥಿಗಳು : ಎಂಟಿಬಿ ನಾಗರಾಜ್ (ಬಿಜೆಪಿ),ಪದ್ಮಾವತಿ ಸುರೇಶ್ (ಕಾಂಗ್ರೆಸ್), ಶರತ್ ಬಚ್ಚೇಗೌಡ (ಪಕ್ಷೇತರ)

ಪಕ್ಷೇತರ ಅಭ್ಯರ್ಥಿ ಶರತ್ ಬಚ್ಚೇಗೌಡಗೆ 5508 ಮತಗಳ ಮುನ್ನಡೆ

ಪಕ್ಷೇತರ ಅಭ್ಯರ್ಥಿ ಶರತ್ ಬಚ್ಚೇಗೌಡಗೆ 3879 ಮತಗಳ ಮುನ್ನಡೆ

ಮುನ್ನಡೆ ಕಾಯ್ದುಕೊಂಡ ಪಕ್ಷೇತರ ಅಭ್ಯರ್ಥಿ ಶರತ್ ಬಚ್ಚೇಗೌಡಗೆ ಮುನ್ನಡೆ.

ಆರಂಭದಿಂದಲೂ ಬಿಜೆಪಿ ಅಭ್ಯರ್ಥಿ ನಾಗರಾಜ್ ಮತ್ತು ಕಾಂಗ್ರೆಸ್ಸಿನ ಪದ್ಮಾವತಿ ಸುರೇಶ್​​ಗೆ ಹಿನ್ನಡೆ,

ಪಕ್ಷೇತರ ಅಭ್ಯರ್ಥಿ ಶರತ್ ಬಚ್ಚೇಗೌಡಗೆ ಮುನ್ನಡೆ

ಬೆಳಗ್ಗೆ 8 ಗಂಟೆ ಮತ ಎಣಿಕೆ ಆರಂಭ

ಹಿರೇಕೇರೂರು : 

ಬಿಜೆಪಿ ಅಭ್ಯರ್ಥಿ ಬಿ ಸಿ ಪಾಟೀಲ್​ಗೆ ಭರ್ಜರಿ ಗೆಲುವು

ಅಭ್ಯರ್ಥಿಗಳು : ಬಿ.ಸಿ ಪಾಟೀಲ್ (ಬಿಜೆಪಿ),ಬಿ.ಹೆಚ್​ ಬನ್ನಿಕೋಡ್​​ (ಕಾಂಗ್ರೆಸ್)

ಬಿ.ಸಿ ಪಾಟೀಲ್​ ಗೆ 6386 ಮತಗಳ ಅಂತರದ ಮುನ್ನಡೆ

ಬಿ.ಸಿ ಪಾಟೀಲ್​ ಗೆ3520 ಮತಗಳ ಅಂತರದ ಮುನ್ನಡೆ

ಬಿ.ಸಿ ಪಾಟೀಲ್​ ಗೆ2188 ಮತಗಳ ಅಂತರದ ಮುನ್ನಡೆ

ಬಿ.ಸಿ ಪಾಟೀಲ್​  ಗೆ2475 ಮತಗಳ ಅಂತರದ ಮುನ್ನಡೆ

ಬಿ.ಸಿ ಪಾಟೀಲ್​ಗೆ ಕೇವಲ 5 ಮತಗಳ ಅಂತರದ ಮುನ್ನಡೆ.

ಬಿಜೆಪಿ ಅಭ್ಯರ್ಥಿ ಬಿ.ಸಿ ಪಾಟೀಲ್​ಗೆ ಮುನ್ನಡೆ.

ಬೆಳಗ್ಗೆ 8 ಗಂಟೆ ಮತ ಎಣಿಕೆ ಆರಂಭ

ಕೆ.ಆರ್ ಪೇಟೆ : 

ಬಿಜೆಪಿ ಅಭ್ಯರ್ಥಿ ಕೆಸಿ ನಾರಾಯಣಗೌಡ್ರಿಗೆ ಗೆಲುವು

ಅಭ್ಯರ್ಥಿಗಳು : ಕೆ.ಸಿ ನಾರಾಯಣಗೌಡ (ಬಿಜೆಪಿ),ಕೆ.ಬಿ ಚಂದ್ರಶೇಖರ್(ಕಾಂಗ್ರೆಸ್), ದೇವರಾಜ್ (ಜೆಡಿಎಸ್)

ಜೆಡಿಎಸ್ ಅಭ್ಯರ್ಥಿ ದೇವರಾಜ್​ಗೆ ಮುನ್ನಡೆ.

ಬೆಳಗ್ಗೆ 8 ಗಂಟೆ ಮತ ಎಣಿಕೆ ಆರಂಭ

ಶಿವಾಜಿನಗರ :

ಶಿವಾಜಿನಗರದಲ್ಲಿ ರಿಜ್ವಾನ್ ವಿರಾಜಮಾನ 

ಅಭ್ಯರ್ಥಿಗಳು :  ಎಂ ಶರವಣ (ಬಿಜೆಪಿ), ರಿಜ್ವಾನ್ ಅರ್ಷದ್ (ಕಾಂಗ್ರೆಸ್), ತನ್ವೀರ್ ಅಹಮ್ಮದ್ (ಜೆಡಿಎಸ್)

ಕಾಂಗ್ರೆಸ್ ಅಭ್ಯರ್ಥಿ ರಿಜ್ವಾನ್ ಅರ್ಷದ್​ಗೆ 3802 ಮತಗಳ ಅಂತರ.

ಮತ ಎಣಿಕೆ ಕೇಂದ್ರದಿಂದ ನಿರ್ಗಮಿಸಿದ ಬಿಜೆಪಿ ಅಭ್ಯರ್ಥಿ ಶರವಣ

ಕಾಂಗ್ರೆಸ್ ಅಭ್ಯರ್ಥಿ ರಿಜ್ವಾನ್ ಅರ್ಷದ್​ಗೆ ಮುನ್ನಡೆ.

ಬಿಜೆಪಿ ಅಭ್ಯರ್ಥಿ ಶರವಣಗೆ ಮುನ್ನಡೆ.

ಕಾಂಗ್ರೆಸ್ ಅಭ್ಯರ್ಥಿ ರಿಜ್ವಾನ್ ಅರ್ಷದ್​ಗೆ ಮುನ್ನಡೆ.

ಆರಂಭದಲ್ಲಿ ಬಿಜೆಪಿ ಅಭ್ಯರ್ಥಿ ಶರವಣಗೆ ಮುನ್ನಡೆ.

ಬೆಳಗ್ಗೆ 8 ಗಂಟೆ ಮತ ಎಣಿಕೆ ಆರಂಭ

ರಾಣೆಬೆನ್ನೂರು : 

ರಾಣೆಬೆನ್ನೂರಲ್ಲಿ ಉದಯಿಸಿದ `ಅರುಣ’..!

ಅಭ್ಯರ್ಥಿಗಳು :  ಅರುಣ್​​​ಕುಮಾರ್​ ಪೂಜಾರ್ (ಬಿಜೆಪಿ), ಕೆ.ಬಿ ಕೋಳಿವಾಡ (ಕಾಂಗ್ರೆಸ್), ಮಲ್ಲಿಕಾರ್ಜುನ ಹಲಗೇರಿ (ಜೆಡಿಎಸ್)

ಬಿಜೆಪಿ ಅಭ್ಯರ್ಥಿ ಅರುಣ್ ಕುಮಾರ್ ಪೂಜಾರ್​ಗೆ 470 ಮತಗಳ ಮುನ್ನಡೆ.

ಬಿಜೆಪಿ ಅಭ್ಯರ್ಥಿ ಅರುಣ್ ಕುಮಾರ್ ಪೂಜಾರ್​ಗೆ ಮುನ್ನಡೆ.

ಕಾಂಗ್ರೆಸ್​ನ ಕೆ.ಬಿ ಕೋಳಿವಾಡಗೆ ಮುನ್ನಡೆ

ಬಿಜೆಪಿ ಅಭ್ಯರ್ಥಿ ಅರುಣ್ ಕುಮಾರ್ ಪೂಜಾರ್​ಗೆ ಮುನ್ನಡೆ.

ಕಾಂಗ್ರೆಸ್​ನ ಕೆ.ಬಿ ಕೋಳಿವಾಡಗೆ ಮುನ್ನಡೆ

ಬೆಳಗ್ಗೆ 8 ಗಂಟೆ ಮತ ಎಣಿಕೆ ಆರಂಭ

RELATED ARTICLES

Related Articles

TRENDING ARTICLES