Wednesday, January 22, 2025

ಸರ್ಕಾರ ಸೇಫ್ ; ಅರ್ಹತಾ ಪರೀಕ್ಷೆಯಲ್ಲಿ ಇಬ್ಬರು ಅನರ್ಹರು ಮಾತ್ರ ಫೇಲ್!

ಬೆಂಗಳೂರು : ಬಿ.ಎಸ್ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಮತ್ತು ಮೈತ್ರಿ ಸರ್ಕಾರದ ಪತನಕ್ಕೆ ಕಾರಣರಾಗಿ ಅನರ್ಹತೆ ಶಿಕ್ಷೆಗೊಳಗಾದ ಶಾಸಕರ ಭವಿಷ್ಯ ನಿರ್ಧಾರದ ಚುನಾವಣೆ ಎಂದೇ ಬಿಂಬಿತವಾಗಿದ್ದ ಉಪ ಚುನಾವಣೆಯ ಫಲಿತಾಂಶ ಹೊರಬಂದಿದೆ. ನಿಮ್ಮ ಪವರ್ ಟಿವಿ ನಡೆಸಿದ್ದ ಮತಗಟ್ಟೆ ಸಮೀಕ್ಷೆ ನೂರಕ್ಕೆ ನೂರರಷ್ಟು ನಿಜವಾಗಿದೆ. ಒಟ್ಟು 15 ಕ್ಷೇತ್ರಗಳಲ್ಲಿ 12ರಲ್ಲಿ ಬಿಜೆಪಿ ಗೆಲುವು ಸಾಧಿಸಿದ್ದು, 2 ಕ್ಷೇತ್ರಗಳಲ್ಲಿ ಮಾತ್ರ ಕಾಂಗ್ರೆಸ್ ಗೆದ್ದಿದೆ. ಒಂದು ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿ ಪರ ಮತದಾರರು ಒಲವು ತೋರಿದ್ದಾರೆ.
ಅರ್ಹತಾ ಪರೀಕ್ಷೆಯಲ್ಲಿ ಪಾಸಾದವರು
15 ಕ್ಷೇತ್ರಗಳಲ್ಲಿ ಶಿವಾಜಿ ನಗರ ಮತ್ತು ರಾಣೆಬೆನ್ನೂರು ಹೊರತುಪಡಿಸಿ 13 ಕ್ಷೇತ್ರಗಳಲ್ಲಿ ಬಿಜೆಪಿ ಅನರ್ಹ ಶಾಸಕರನ್ನು ಕಣಕ್ಕಿಳಿಸಿತ್ತು. ಈ 13 ಕ್ಷೇತ್ರಗಳಲ್ಲಿ ಹುಣಸೂರು ಮತ್ತು ಹೊಸಕೋಟೆ ಹೊರತುಪಡಿಸಿ ಉಳಿದೆಲ್ಲೆಡೆ ಕಮಲ ಅರಳಿದೆ. ಹೊಸಕೋಟೆಯಲ್ಲಿ ಎಂಟಿಬಿ ನಾಗರಾಜ್ ಪಕ್ಷೇತರ ಅಭ್ಯರ್ಥಿ ಶರತ್ ಬಚ್ಚೇಗೌಡ ವಿರುದ್ಧ ಹೀನಾಯ ಸೋಲನುಭವಿಸಿದ್ದರೆ, ಹುಣಸೂರಲ್ಲಿ ಹೆಚ್​.ವಿಶ್ವನಾಥ್ ಕಾಂಗ್ರೆಸ್​​ನ ಹೆಚ್​.ಪಿ ಮಂಜುನಾಥ್ ವಿರುದ್ಧ ಪರಾಭವಗೊಂಡಿದ್ದಾರೆ.

ಕ್ಷೇತ್ರವಾರು ಗೆಲುವು, ಸೋಲು, ಗೆಲುವಿನ ಅಂತರದ ಡೀಟೆಲ್ಸ್ ಇಲ್ಲಿದೆ. 
ರಾಣೆಬೆನ್ನೂರು 
ಅರುಣ್ ಕುಮಾರ್ ಪೂಜಾರ್ (ಬಿಜೆಪಿ) : 95,438 ಮತಗಳು
ಕೆ.ಬಿ ಕೋಳಿವಾಡ (ಕಾಂಗ್ರೆಸ್ ) : 72,216 ಮತಗಳು
ಗೆಲುವಿನ ಅಂತರ : 23,222 ಮತಗಳು

ಅಥಣಿ
ಮಹೇಶ್ ಕುಮಟಳ್ಳಿ (ಬಿಜೆಪಿ) : 99,203 ಮತಗಳು
ಗಜಾನನ ಮಂಗಸೂಳೆ (ಕಾಂಗ್ರೆಸ್) : 59,214 ಮತಗಳು
ಗೆಲುವಿನ ಅಂತರ : 39, 989 ಮತಗಳು

ಗೋಕಾಕ್
ರಮೇಶ್​​ ಜಾರಕಿಹೊಳಿ (ಬಿಜೆಪಿ) : 87,450ಮತಗಳು
ಲಖನ್​ ಜಾರಕಿಹೊಳಿ (ಕಾಂಗ್ರೆಸ್) : 58,444 ಮತಗಳು
ಗೆಲುವಿನ ಅಂತರ 29,006 ಮತಗಳು

ಯಲ್ಲಾಪುರ
ಶಿವರಾಮ್ ಹೆಬ್ಬಾರ್ (ಬಿಜೆಪಿ) : 80,462 ಮತಗಳು
ಭೀಮಣ್ಣ ನಾಯ್ಕ್​ (ಕಾಂಗ್ರೆಸ್) : 49,034 ಮತಗಳು
ಗೆಲುವಿನ ಅಂತರ : 31, 428 ಮತಗಳು

ವಿಜಯ ನಗರ
ಆನಂದ್ ಸಿಂಗ್ (ಬಿಜೆಪಿ) : 85,477 ಮತಗಳು
ವೆಂಕಟರಾವ್​ ಘೋರ್ಪಡೆ (ಕಾಂಗ್ರೆಸ್) : 55,352 ಮತಗಳು
ಗೆಲುವಿನ ಅಂತರ : 30,125 ಮತಗಳು

ಕೆ.ಆರ್​ ಪುರಂ
ಭೈರತಿ ಬಸವರಾಜ್ (ಬಿಜೆಪಿ) : 1,39,879 ಮತಗಳು
ನಾರಾಯಣಸ್ವಾಮಿ (ಕಾಂಗ್ರೆಸ್) : 76,436 ಮತಗಳು
ಗೆಲುವಿನ ಅಂತರ : 63,443 ಮತಗಳು

ಯಶವಂತಪುರ
ಎಸ್​ ಟಿ ಸೋಮಶೇಖರ್ (ಬಿಜೆಪಿ) : ,1,44,722 ಮತಗಳು
ಜವರಾಯಿಗೌಡ (ಜೆಡಿಎಸ್​) :1,17,023 ಮತಗಳು
ಗೆಲುವಿನ ಅಂತರ : 27,699 ಮತಗಳು

ಮಹಾಲಕ್ಷ್ಮೀ ಲೇಔಟ್
ಕೆ. ಗೋಪಾಲಯ್ಯ (ಬಿಜೆಪಿ) : 85,889 ಮತಗಳು
ಎಂ ಶಿವರಾಜ್ (ಕಾಂಗ್ರೆಸ್) : 31,503ಮತಗಳು
ಗೆಲುವಿನ ಅಂತರ 54,386 ಮತಗಳು

ಹುಣಸೂರು
ಹೆಚ್​.ಪಿ ಮಂಜುನಾಥ್ (ಕಾಂಗ್ರೆಸ್​ ) : 92,725 ಮತಗಳು
ಹೆಚ್. ವಿಶ್ವನಾಥ್ (ಬಿಜೆಪಿ) : 52,998ಮತಗಳು
ಗೆಲುವಿನ ಅಂತರ : 39,727 ಮತಗಳು

ಕೆ.ಆರ್​ ಪೇಟೆ
ನಾರಾಯಣಗೌಡ (ಬಿಜೆಪಿ) : 66,094 ಮತಗಳು
ದೇವರಾಜ್ (ಜೆಡಿಎಸ್​) : 56,636 ಮತಗಳು
ಗೆಲುವಿನ ಅಂತರ : 9458 ಮತಗಳು

ಹೊಸಕೋಟೆ
ಶರತ್ ಬಚ್ಚೇಗೌಡ (ಪಕ್ಷೇತರ ) : 81,671 ಮತಗಳು
ಎಂಟಿಬಿ ನಾಗರಾಜ್ (ಬಿಜೆಪಿ) : 70,185 ಮತಗಳು
ಗೆಲುವಿನ ಅಂತರ : 11,486 ಮತಗಳು

ಕಾಗವಾಡ
ಶ್ರೀಮಂತ್ ಪಾಟೀಲ್ (ಬಿಜೆಪಿ) : 76,952 ಮತಗಳು
ರಾಜುಕಾಗೆ (ಕಾಂಗ್ರೆಸ್) : 58,995 ಮತಗಳು
ಗೆಲುವಿನ ಅಂತರ : 17,957 ಮತಗಳು

ಹೀರೆಕೆರೂರು
ಬಿ.ಸಿ ಪಾಟೀಲ್ (ಬಿಜೆಪಿ) : 85,562 ಮತಗಳು
ಬಿ.ಹೆಚ್ ಬನ್ನಿಕೋಡ್ (ಕಾಂಗ್ರೆಸ್) : 56,495ಗಳು
ಗೆಲುವಿನ ಅಂತರ : 29,067 ಮತಗಳು

ಶಿವಾಜಿನಗರ
ರಿಜ್ವಾನ್ ಅರ್ಷದ್​ (ಕಾಂಗ್ರೆಸ್) : 49,890ಮತಗಳು
ಎಂ.ಶರವಣ (ಬಿಜೆಪಿ) : 36,369 ಮತಗಳು
ಗೆಲುವಿನ ಅಂತರ : 13,521 ಮತಗಳು

ಚಿಕ್ಕಾಬಳ್ಳಾಪುರ
ಡಾ.ಸುಧಾಕರ್ (ಬಿಜೆಪಿ) : 84,389 ಮತಗಳು
ಎಂ ಆಂಜನಪ್ಪ (ಕಾಂಗ್ರೆಸ್) : 49,588 ಮತಗಳು
ಗೆಲುವಿನ ಅಂತರ : 34, 801 ಮತಗಳು

RELATED ARTICLES

Related Articles

TRENDING ARTICLES