Sunday, May 11, 2025

ಕಾಂಗ್ರೆಸ್​ ಸೋಲಿನ ಬೆನ್ನಲ್ಲೇ ಬಿಜೆಪಿಗೆ ಜೈ ಎಂದ `ಹುಲಿಯಾ’!

ಕಾಗವಾಡ : ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲುತ್ತಿದ್ದಂತೆ ಮಾಜಿ ಸಿಎಂ ಸಿದ್ದರಾಮಯ್ಯ ಸಿಎಲ್​ಪಿ ನಾಯಕ ಸ್ಥಾನವನ್ನು, ದಿನೇಶ್ ಗುಂಡೂರಾವ್ ಕೆಪಿಸಿಸಿ ಅಧ್ಯಕ್ಷ ಸ್ಥಾನವನ್ನು ತ್ಯಜಿಸಿದ್ದಾರೆ. ಈ ಎಲ್ಲಾ ಬೆಳವಣಿಗೆಗಳ ನಡುವೆ ‘ಹುಲಿಯಾ’ ಖ್ಯಾತಿಯ ವ್ಯಕ್ತಿ ಬಿಜೆಪಿಗೆ ಸೇರಿದ್ದಾರೆ.
ಕಾಗವಾಡದಲ್ಲಿ ಎಲೆಕ್ಷನ್ ಪ್ರಚಾರದ ವೇಳೆ ಮಾಜಿ ಸಿಎಂ ಸಿದ್ದರಾಮಯ್ಯ ಮಾತನಾಡುವಾಗ ‘ಹೌದು ಹುಲಿಯಾ’ ಎಂದು ಕರೆದು ಸಿಕ್ಕಾಪಟ್ಟೆ ಫೇಮಸ್ ಆಗಿರೋ ಪೀರಪ್ಪ ಕಟ್ಟಿಮನಿ ಸದ್ದಿಲ್ಲದೆ ಬಿಜೆಪಿಗೆ ಸೇರಿದ್ದಾರೆ.
ಹುಲಿಯಾ ಪದದ ಟ್ರೆಂಡ್ ಸೆಟ್ಟರ್ ಪೀರಪ್ಪ ಬಿಜೆಪಿಗೆ ಜೈ ಜೈ ಅಂದಿದ್ದು, ಬಿಜೆಪಿಗೆ ಸೇರುತ್ತಿದ್ದಂತೆ ‘ರಾಜಾಹುಲಿ’ ಅಂತ ಜೈಕಾರ ಕೂಗಿದ್ದಾರೆ.

RELATED ARTICLES

Related Articles

TRENDING ARTICLES