Monday, December 23, 2024

ಹುಟ್ಟೂರಲ್ಲಿ ಕಮಲ ಅರಳಿದಕ್ಕೆ ಯಡಿಯೂರಪ್ಪ ಫುಲ್ ಖುಷ್ !

ಬೆಂಗಳೂರು: ಕೆ.ಆರ್.ಪೇಟೆಯಲ್ಲಿ ಬಿಜೆಪಿ ಗೆಲುವು ಸಾಧಿಸಿರುವುದು ನನಗೆ ತುಂಬಾ ಖುಷಿ ಕೊಟ್ಟಿದೆ ,ಕೊಟ್ಟ ಮಾತಿನಂತೆ ಗೆದ್ದ ಎಲ್ಲಾ ಅಭ್ಯರ್ಥಿಗಳಿಗೂ ಸಚಿವ ಸ್ಥಾನ ಕೊಡುತ್ತೇವೆ ಎಂದು ಯಡಿಯೂರಪ್ಪ ಗೆಲುವಿನ ಸಂತಸ ಹಂಚಿಕೊಂಡಿದ್ದಾರೆ .

ಮಾದ್ಯಮದೊಂದಿಗೆ ಮಾತನಾಡಿದ ಯಡಿಯೂರಪ್ಪ ಮಂಡ್ಯದಲ್ಲಿ ಬಿಜೆಪಿ ಇದುವರೆಗೂ ಗೆದ್ದಿರಲಿಲ್ಲ ,ಈಗ ಕೆ.ಆರ್. ಪೇಟೆಯಲ್ಲಿ ನಾರಯಣಗೌಡರು ಗೆಲುವು ಸಾಧಿಸಿದ್ದಾರೆ .ಹುಟ್ಟೂರಲ್ಲಿ ಕಮಲ ಅರಳಿರುವುದು ಸಂತೋಷವಾಗಿದೆ. ಗೆಲುವಿಗಾಗಿ ಶ್ರಮಿಸಿದ ಎಲ್ಲ ನಾಯಕರುಗಳು ಹಾಗೂ ಕಾರ್ಯಕರ್ತರಿಗೂ ಅಭಿನಂದನೆ ಸಲ್ಲಿಸುತ್ತೇನೆ ಎಂದರು.

15 ಕ್ಷೇತ್ರಗಳಲ್ಲಿ 12 ಕ್ಷೇತ್ರಗಳಲ್ಲಿ ಜನ ಅಶೀರ್ವಾದ ಮಾಡಿದ್ದಾರೆ. ವಿಪಕ್ಷಗಳನ್ನು ನಾನು ಟೀಕಿಸುವುದಕ್ಕೆ ಹೋಗುವುದಿಲ್ಲ, ಜನರು ನಮ್ಮ ಪರವಾಗಿದ್ದಾರೆ , ಇನ್ನು ಮುಂದಾದರು ವಿಪಕ್ಷಗಳು ರಾಜ್ಯದ ಅಭಿವೃದ್ದಿಗೆ ಸಹಕಾರ ನೀಡಲಿ. ರಾಜ್ಯವನ್ನು ಅಭಿವೃದ್ದಿ ಪಡಿಸುವುದೆ ನಮ್ಮ ಗುರಿಯೆಂದು ಇದೇ ವೇಳೆ ಹೇಳಿದರು .

RELATED ARTICLES

Related Articles

TRENDING ARTICLES