ಚಿಕ್ಕಬಳ್ಳಾಪುರ : ಮತದಾನದ ಬಗ್ಗೆ ಕೆಲವರಿಗೆ ಸಿಕ್ಕಾಪಟ್ಟೆ ಅಸಡ್ಡೆ. ವೋಟ್ ಮಾಡ್ರಪ್ಪಾ ಅಂತ ರಜೆ ಕೊಟ್ರೆ ಆರಾಮಾಗಿ ಟ್ರಿಪ್ ಹೊಡಿತಾರೆ ವಿನಃ ಒಂದ್ ನಿಮಿಷ ಮತಗಟ್ಟೆಗೆ ಹೋಗಿ ಹಕ್ಕು ಚಲಾಯಿಸೋಕೆ ಹಿಂದೆ -ಮುಂದೆ ನೋಡ್ತಾರೆ. ಅಂತದ್ರಲ್ಲಿ ಇಲ್ಲೊಂದು ಕುಟುಂಬ ಏಕಕಾಲದಲ್ಲಿ ಮತಗಟ್ಟೆಗೆ ಹೋಗಿ ಹಕ್ಕು ಚಲಾಯಿಸಿ ಮಾದರಿಯಾಗಿದೆ.
ಕುಟುಂಬ ಅಂದ್ರೆ ಮೂರ್ನಾಲ್ಕು ಜನರ ವಿಭಕ್ತ ಕುಟುಂಬ ಅಲ್ಲ. ನೂರಕ್ಕೂ ಹೆಚ್ಚು ಮಂದಿ ಇರೋ ಅವಿಭಕ್ತ ಕುಟುಂಬ. ಅಚ್ಚರಿಯಾದ್ರೂ ನಂಬಲೇ ಬೇಕಾದ ಸುದ್ದಿಯಿದು. ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ಒಂದೇ ಕುಟುಂಬದ ಬರೋಬ್ಬರಿ 110 ಮಂದಿ ಮತದಾನ ಮಾಡಿದ್ದಾರೆ. ಚಿಕ್ಕಬಳ್ಳಾಪುರದ ಪದವಿ ಪೂರ್ವ ಕಾಲೇಜು ಮತಗಟ್ಟೆಯಲ್ಲಿ ಆ ಕುಟುಂಬದ 30ಕ್ಕೂ ಹೆಚ್ಚು ಮಂದಿ ಏಕಕಾದಲ್ಲಿ ಮತದಾನ ಮಾಡಿದ್ದಾರೆ. ಈ ಮೂಲಕ ಯುವ ಮತದಾರರಿಗೆ ಸ್ಫೂರ್ತಿ, ಮಾದರಿಯಾಗಿದ್ದಾರೆ.
ಒಂದೇ ಕುಟುಂಬದ 110 ಮಂದಿ ಮತದಾನ!
TRENDING ARTICLES