Saturday, January 11, 2025

ಎರಡನೇ ಬಾರಿ ಸೈಯದ್​ ಮುಷ್ತಾಕ್​ ಅಲಿ ಟ್ರೋಫಿ ರಾಜ್ಯದ ಮುಡಿಗೆ

ಸೂರತ್ : ತಮಿಳುನಾಡು ವಿರುದ್ಧದ ರೋಚಕ ಫೈನಲ್ ಮ್ಯಾಚ್​ನಲ್ಲಿ ಗೆಲುವು ಸಾಧಿಸುವುದರೊಂದಿಗೆ ಮನೀಶ್ ಪಾಂಡೆ ನೇತೃತ್ವದ ಕರ್ನಾಟಕ ಎರಡನೇ ಬಾರಿಗೆ ಸೈಯದ್ ಮುಫ್ತಾಕ್ ಅಲಿ ಟ್ರೋಫಿಗೆ ಮುತ್ತಿಕ್ಕಿದೆ.
ಮೊದಲು ಬ್ಯಾಟಿಂಗ್ ಮಾಡಿದ ಕರ್ನಾಟಕ 181ರನ್​ಗಳ ಗುರಿಯನ್ನು ತಮಿಳುನಾಡಿಗೆ ನೀಡಿತ್ತು. ಕ್ಯಾಪ್ಟನ್ ಮನೀಶ್ ಪಾಂಡೆ 45 ಬಾಲ್​ಗಳಲ್ಲಿ 60ರನ್, ದೇವದತ್ ಪಡಿಕಲ್ 32, ರೋಹನ್ ಕದಮ್ 35 ಮತ್ತು ಕೆ ಎಲ್ ರಾಹುಲ್ 22ರನ್​ಗಳಿಸಿ ಬೃಹತ್ ಮೊತ್ತಕ್ಕೆ ನೆರವಾದ್ರು. ಗುರಿ ಬೆನ್ನತ್ತಿದ ತಮಿಳುನಾಡು ಉತ್ತಮ ಆಟವನ್ನು ಪ್ರದರ್ಶಿಸಿ, ಗೆಲುವಿನತ್ತ ದಿಟ್ಟ ಹೆಜ್ಜೆ ಇಟ್ಟರೂ ಕೊನೆಯ ಬಾಲ್​ನಲ್ಲಿ ಕೇವಲ ಒಂದು ರನ್​ನಿಂದ ಸೋಲನುಭವಿಸಿತು. ಇದರೊಂದಿಗೆ ಕರ್ನಾಟಕ ಎರಡನೇ ಬಾರಿ ಸೈಯದ್ ಮುಫ್ತಾಕ್ ಅಲಿ ಟ್ರೋಫಿಯನ್ನು ಎತ್ತಿ ಹಿಡಿಯಿತು.

RELATED ARTICLES

Related Articles

TRENDING ARTICLES