Tuesday, December 24, 2024

”ಸಿದ್ದರಾಮಯ್ಯ ಒಬ್ಬ ಹುಚ್ಚ” : ಕೆ.ಎಸ್ ಈಶ್ವರಪ್ಪ

ಹುಬ್ಬಳ್ಳಿ : ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಒಬ್ಬ ಹುಚ್ಚ ಅಂತ ಸಚಿವ ಕೆ.ಎಸ್ ಈಶ್ವರಪ್ಪ ವಾಗ್ದಾಳಿ ನಡೆಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ”ಸಿದ್ದರಾಮಯ್ಯನಿಗೆ ಹುಚ್ಚ ಎಂದು ಕರೆದರೆ ಸಿಟ್ಟು ಬರುತ್ತೆ. ನಾಳೆ ನನ್ನ ಬಗ್ಗೆ ಮತ್ತೆ ಬೇರೆಯದ್ದೇ ಮಾತನಾಡುತ್ತಾರೆ. ಆದ್ರೆ, ನಾನು ಹೇಳುತ್ತಿದ್ದೇನೆ ಸಿದ್ದರಾಮಯ್ಯ ಒಬ್ಬ ಹುಚ್ಚ. ಉಪ ಚುನಾವಣೆ ಬಳಿಕ‌ ಸಿಎಂ ಆಗುವ ಆಸೆಯಲ್ಲಿ ಅವರಿದ್ದಾರೆ ಎಂದು ಹೇಳಿದರು.
ಚುನಾವಣೆಯಲ್ಲಿ ಕಾಂಗ್ರೆಸ್​ 8 ಸೀಟು ಗೆದ್ದರೆ ನಾನು ರಾಜೀನಾಮೆ ನೀಡುತ್ತೇನೆ. 8 ಸೀಟು ಗೆಲ್ಲದಿದ್ರೆ ಸಿದ್ದು ವಿರೋಧ ಪಕ್ಷದ ಸ್ಥಾನಕ್ಕೆ ರಾಜೀನಾಮೆ ಕೊಡ್ತಾರಾ? ಅಂತ ಸವಾಲು ಹಾಕಿದರು.
ಕಾಂಗ್ರೆಸ್​, ಜೆಡಿಎಸ್​ ಮೈತ್ರಿ ಆಗುತ್ತೆ ಅಂದ್ರೆ ಅದು ನಗೆಪಾಟಲು. ಮೈತ್ರಿಯಲ್ಲಿ ಏನೆಲ್ಲಾ ಕಷ್ಟ ಅನುಭವಿಸಿದ್ದಾರೆ ಅನ್ನೋದನ್ನ ಹೆಚ್​ಡಿಕೆ ಹೇಳಿದ್ದಾರೆ. ಮೈತ್ರಿ ಸರ್ಕಾರ ಬೀಳಲು ಸಿದ್ದರಾಮಯ್ಯ ಕಾರಣ ಎಂದು ಹೆಚ್‌ಡಿಕೆಯೇ ಹೇಳಿದ್ದಾರೆ ಎಂದು ಹರಿಹಾಯ್ದರು.

RELATED ARTICLES

Related Articles

TRENDING ARTICLES