Monday, December 23, 2024

‘ಮಹಾ’ ಸರ್ಕಸ್ ಅಂತ್ಯ : ದೇವೇಂದ್ರ ಫಡ್ನವಿಸ್ ಸಿಎಂ, ಅಜಿತ್ ಪವಾರ್ ಡಿಸಿಎಂ..!

ಮುಂಬೈ : ಅಂತೂ- ಇಂತೂ ಹೆಚ್ಚುಕಮ್ಮಿ ಒಂದು ತಿಂಗಳಿಂದ ನಡೆದ ‘ ಮಹಾ’ ಸರ್ಕಸ್ ಅಂತ್ಯವಾಗಿದೆ. ರಾಜಕೀಯ ಕ್ಷಿಪ್ರ ಬೆಳವಣಿಗೆಯಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿಯಾಗಿ ದೇವೇಂದ್ರ ಫಡ್ನವಿಸ್ ಹಾಗೂ ಉಪ ಮುಖ್ಯಮಂತ್ರಿಯಾಗಿ ಅಜಿತ್ ಪವಾರ್ ಅಧಿಕಾರವಹಿಸಿಕೊಂಡಿದ್ದಾರೆ. ಬಿಜೆಪಿ – ಎನ್ ಸಿಪಿ ಮೈತ್ರಿಯೊಂದಿಗೆ ಮಹಾರಾಷ್ಟ್ರ ಸರ್ಕಾರ ರಚನೆಯ ಹಗ್ಗಜಗ್ಗಾಟಕ್ಕೆ ತೆರೆಬಿದ್ದಿದೆ.
ಶನಿವಾರ ಬೆಳಗ್ಗೆ ರಾಜಭವನದಲ್ಲಿ ನಡೆದ ಸಮಾರಂಭದಲ್ಲಿ ನೂತನ ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿಗೆ ರಾಜ್ಯಪಾಲ ಭಗತ್ ಸಿಂಗ್ ಕೋಶಿಯಾರ್ ಪ್ರಮಾಣವಚನ ಬೋಧಿಸಿದರು.
ನಿನ್ನೆ ಮಧ್ಯರಾತ್ರಿಯವರೆಗೆ ಉದ್ಧವ್ ಠಾಕ್ರೆ ನೇತೃತ್ವದಲ್ಲಿ ಶಿವಸೇನಾ – ಎನ್ ಸಿಪಿ ಮತ್ತು ಕಾಂಗ್ರೆಸ್ ಮಹಾ ಮೈತ್ರಿ ಸರ್ಕಾರ ರಚಿಸುತ್ತವೆ ಎಂದೇ ಹೇಳಲಾಗಿತ್ತು. ಈ ಮೂರೂ ಪಕ್ಷಗಳ ನಾಯಕರು ಸಭೆ ನಡೆಸಿ ಉದ್ಧವ್ ಠಾಕ್ರೆ ನೇತೃತ್ವದ ಸರ್ಕಾರ ರಚನೆಗೆ ಮುಂದಾಗಿದ್ದರು. ಆದರೆ ರಾತ್ರೋರಾತ್ರಿ ನಡೆದ ಬೆಳವಣಿಗೆಯಲ್ಲಿ ಬಿಜೆಪಿ – ಎನ್ ಸಿ ಪಿ ಸರ್ಕಾರ ರಚನೆಯಾಗಿದೆ.

RELATED ARTICLES

Related Articles

TRENDING ARTICLES