Wednesday, January 22, 2025

ಬೆಳಗಾವಿ ಅಖಾಡಕ್ಕೆ ಯಡಿಯೂರಪ್ಪ ಎಂಟ್ರಿ!

ಬೆಳಗಾವಿ: ರಾಜ್ಯದಲ್ಲಿ ಉಪ ಚುಣವಣಾ ಕಣ ರಂಗೇರಿದ್ದು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಇಂದಿನಿಂದ ನವೆಂಬರ್ 26 ರ ತನಕ ಉತ್ತರ ಕರ್ನಾಟಕ ಭಾಗದಲ್ಲಿ ಪ್ರಚಾರ ನಡೆಸಲಿದ್ದಾರೆ. ಇಂದು ಬೆಳಗಾವಿಯಲ್ಲಿ ಪ್ರಚಾರ ಆರಂಭಿಸುವ ಬಿಎಸ್ವೈ ಅಥಣಿ ಹಾಗೂ ಕಾಗವಾಡ ಕ್ಷೇತ್ರದಲ್ಲಿ ಪ್ರಚಾರ ಮಾಡಲಿದ್ದಾರೆ ಸಂಜೆ ಗೋಕಾಕ್ ನಲ್ಲಿ ರಮೇಶ್ ಜಾರಕಿಹೊಳಿ ಪರ ಮತಯಾಚನೆ ಮಾಡಲಿದ್ದು, ಕದನ ಕಣ ಇನ್ನಷ್ಟು ಕಾವೆರುವಂತೆ ಕಾಣುತ್ತಿದೆ .
ಮೈತ್ರಿ ಸರ್ಕಾರದ ವಿರುದ್ದ ರೆಬೆಲ್ ಅಗಿ ಸರ್ಕಾರ ಬೀಳಿಸುವಲ್ಲಿ ಯಶಸ್ವಿಯಾಗಿದ್ದ ರಮೇಶ್ ಜಾರಕಿಹೊಳಿ ವಿರುದ್ದ ಕಾಂಗ್ರೆಸ್ ನಿಂದ ಸಹೋದರ ಲಖನ್ ಜಾರಕಿಹೊಳಿ ಕಣದಲ್ಲಿದ್ದಾರೆ. ಶತಾಯ-ಗತಾಯ ರಮೇಶ್ ಜಾರಕಿಹೊಳಿಯನ್ನು ಸೋಲಿಸಬೇಕೆಂದು ಜೆಡಿಎಸ್ ಹಾಗೂ ಕಾಂಗ್ರೆಸ್ ಪಣ ತೊಟ್ಟಿದೆ.
ಬಿಜೆಪಿ ಸರ್ಕಾರದ ಭವಿಷ್ಯ ಉಪ ಚುನಾವಣೆಯ ಪಲಿತಾಂಶ ಮೇಲೆ ನಿಂತಿದ್ದು , ಇತ್ತ ಅನರ್ಹ ಶಾಸಕರನ್ನು ಗೆಲ್ಲಿಸಿಯೇ ಸಿದ್ದ ಎಂದು ಯಡಿಯೂರಪ್ಪ ಕಾಲಿಗೆ ಚಕ್ರಕಟ್ಟಿಕೊಂಡವರಂತೆ ಮತಬೇಟೆ ಶುರು ಮಾಡಿದ್ದಾರೆ. 

RELATED ARTICLES

Related Articles

TRENDING ARTICLES