Wednesday, January 22, 2025

‘ಮಹಾ’ ಸರ್ಕಸ್ ಕ್ಲೈಮ್ಯಾಕ್ಸ್​ : ಉದ್ಧವ್ ಠಾಕ್ರೆ ಮುಂದಿನ ಸಿಎಂ?

ಮುಂಬೈ : ಹಲವು ದಿನಗಳ ಹಗ್ಗಜಗ್ಗಾಟದ ಬಳಿಕ ‘ಮಹಾ’ಸರ್ಕಸ್ ಕ್ಲೈಮ್ಯಾಕ್ಸ್ ಹಂತ ತಲುಪಿದೆ. ಮಹಾರಾಷ್ಟ್ರದಲ್ಲಿ ಉದ್ಧವ್ ಠಾಕ್ರೆ ನೇತೃತ್ವದಲ್ಲಿ ಶಿವಸೇನಾ – ಎನ್​ ಸಿಪಿ -ಕಾಂಗ್ರೆಸ್ ಮಹಾ ಮೈತ್ರಿಕೂಟ ಸರ್ಕಾರ ರಚಿಸಲು ತೀರ್ಮಾನಿಸಿವೆ. ನಾಳೆ ಮೂರೂ ಪಕ್ಷಗಳು ಸುದ್ದಿಗೋಷ್ಠಿ ನಡೆಸಿ ಅಧಿಕೃತ ಘೋಷಣೆ ಮಾಡಲಿದ್ದು, ಬಳಿಕ ರಾಜ್ಯಪಾಲರಲ್ಲಿ ಹಕ್ಕು ಮಂಡನೆ ಮಾಡಲಿವೆ.
ಮುಂಬೈನಲ್ಲಿ ಇಂದು ಶರದ್ ಪವರ್, ಉದ್ಧವ್ ಠಾಕ್ರೆ, ಮಾಜಿ ಸಂಸದ ಮಲ್ಲಿಕಾರ್ಜುನ ಖರ್ಗೆ ಮೊದಲಾದ ಕಾಂಗ್ರೆಸ್​, ಶಿವಸೇನೆ, ಎನ್​ಸಿಪಿಯ ನಾಯಕರು ಸಭೆ ನಡೆಸಿ, ಮಹಾಮೈತ್ರಿ ಸರ್ಕಾರ ರಚಿಸಲು ಹಾಗೂ 5 ವರ್ಷಗಳ ಕಾಲ ಉದ್ಧವ್ ಠಾಕ್ರೆ ಅವರನ್ನು ಮುಖ್ಯಮಂತ್ರಿ ಮಾಡುವ ತೀರ್ಮಾನಕ್ಕೆ ಬಂದಿದ್ದಾರೆ ಎಂದು ತಿಳಿದುಬಂದಿದೆ.
ಸಭೆಯ ಬಳಿಕ ಮಾತನಾಡಿದ ಎನ್​ಸಿಪಿ ಮುಖ್ಯಸ್ಥ ಶರದ್​ ಪವರ್, ಶನಿವಾರ ಮೂರು ಪಕ್ಷಗಳು ಸೇರಿ ಸುದ್ದಿಗೋಷ್ಠಿ ನಡೆಸುತ್ತೇವೆ, ಮೈತ್ರಿ ಸರ್ಕಾರದ ರಚನೆ ಬಗ್ಗೆ ಚರ್ಚೆ ಮುಂದುವರೆದಿದೆ ಎಂದು ತಿಳಿಸಿದ್ದಾರೆ. ಹೀಗಾಗಿ ನಾಳೆ ಮೂರೂ ಪಕ್ಷಗಳು ಅಂತಿಮ ನಿರ್ಧಾರಕ್ಕೆ ಬರಲಿವೆ.

RELATED ARTICLES

Related Articles

TRENDING ARTICLES