Monday, February 24, 2025

“ನಾನು ಕಾಂಗ್ರೆಸ್ ಬಿಟ್ಟಿಲ್ಲ ; ಸಿದ್ದರಾಮಯ್ಯ ಬಿಡಿಸಿದ್ದು”!

ಮೈಸೂರು : ಕಾಂಗ್ರೆಸ್ ಪಕ್ಷವನ್ನು ನಾನು ಬಿಟ್ಟಿಲ್ಲ. ಸಿದ್ದರಾಮಯ್ಯ ಬಿಡಿಸಿದ್ದು ಅಂತ ಅನರ್ಹ ಶಾಸಕ ಹೆಚ್ ವಿಶ್ವನಾಥ್ ಹೇಳಿದ್ದಾರೆ.
ಹಲ್ಲೆಗೊಳಗಾಗಿ ಚಿಕಿತ್ಸೆ ಪಡೆಯುತ್ತಿರುವ ಮಾಜಿ ಸಚಿವ ತನ್ವೀರ್ ಸೇಠ್ ಆರೋಗ್ಯ ವಿಚಾರಿಸಲು ಮೈಸೂರಿನ ಕೊಲಂಬಿಯ ಏಷ್ಯಾ ಆಸ್ಪತ್ರೆಗೆ ತೆರಳಿದ್ದ ವಿಶ್ವನಾಥ್ ಅವರಿಗೆ ಮಾಜಿ ಸಂಸದ ಧ್ರುವನಾರಾಯಣ್ ಎದುರಾದ್ರು. ಈ ವೇಳೆ ‘ನಾನು ನಿಮ್ಗೆ ಕಾಂಗ್ರೆಸ್ ಬಿಡ್ಬೇಡಿ ಅಂತ ಮನವಿ ಮಾಡಿಕೊಂಡಿದ್ದೆ. ಆದ್ರೂ ನೀವು ಕಾಂಗ್ರೆಸ್ ಗೆ ನಮಸ್ಕಾರ ಅಂತ ಬಿಟ್ಟು ಬಂದ್ರಿ’ ಎಂದು ಧ್ರುವನಾರಾಯಣ್ ಹೇಳಿದ್ರು. ಅದಕ್ಕೆ ನಗುತ್ತಲೇ ಉತ್ತರಿಸಿದ ವಿಶ್ವನಾಥ್, ‘ಕಾಂಗ್ರೆಸ್ ಪಕ್ಷ ನಿಮ್ಮ ಸಿದ್ದರಾಮಯ್ಯರದ್ದು ಅಲ್ವೇನಪ್ಪಾ? ನಾವು ಓಡಾಡ್ತಿರ್ತಿವಿ.. ಎಲ್ಲಾ ಕಡೆ ಒಳ್ಳೆದು, ಕೆಟ್ಟದ್ದು ಇದ್ದೇ ಇರುತ್ತೆ. ಅಷ್ಟೇ ಅಲ್ಲ ಕಾಂಗ್ರೆಸ್ ಪಕ್ಷವನ್ನು ನಾನು ಬಿಟ್ಟಿಲ್ಲ, ಸಿದ್ದರಾಮಯ್ಯರವರೇ ಬಿಡಿಸಿದ್ದು’ ಎಂದರು.

RELATED ARTICLES

Related Articles

TRENDING ARTICLES