ಕಾರವಾರ : ಸೋದರ ಮಾವನ ವಿರುದ್ಧವೇ ಅಳಿಯ ಪ್ರಚಾರಕ್ಕಿಳಿದ ಅಪರೂಪದ ಕ್ಷಣಕ್ಕೆ ಯಲ್ಲಾಪುರ ಸಾಕ್ಷಿಯಾಗಿದೆ. ರಾಜ್ಯದಲ್ಲಿ ಉಪ ಚುನಾವಣಾ ಅಖಾಡ ರಂಗೇರುತ್ತಿದ್ದು, ಯಲ್ಲಾಪುರ ರಣಕಣ ಕೂಡ ಕಾವೇರಿದೆ. ಈ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಶಿವರಾಮ್ ಹೆಬ್ಬಾರ್ ಕಣದಲ್ಲಿದ್ದು, ಕಾಂಗ್ರೆಸ್ ಭೀಮಣ್ಣ ನಾಯ್ಕ್ ಅವರನ್ನು ಅಖಾಡಕ್ಕೆ ಇಳಿಸಿದೆ. ಕಾಂಗ್ರೆಸ್ ರಣಕಲಿ ಭೀಮಣ್ಣ ನಾಯ್ಕ್ ಬಿಜೆಪಿ ಶಾಸಕ ಕುಮಾರ ಬಂಗಾರಪ್ಪ ಅವರ ಸೋದರ ಮಾವ!
ಇದೀಗ ಕುಮಾರ ಬಂಗಾರಪ್ಪ ತಮ್ಮ ಅಭ್ಯರ್ಥಿ ಶಿವರಾಮ್ ಹೆಬ್ಬಾರ್ ಅವರ ಪರ ಪ್ರಚಾರದಲ್ಲಿ ನಿರತರಾಗಿದ್ದು, ಸೋದರ ಮಾವ ಭೀಮನಾಯ್ಕ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಶಿವರಾಮ್ ಹೆಬ್ಬಾರ್ ಪರ ಪ್ರಚಾರ ಸಭೆಯಲ್ಲಿ ಪಾಲ್ಗೊಂಡ ಅವರು , ಕಾಂಗ್ರೆಸ್ ಅಭ್ಯರ್ಥಿ ಡಮ್ಮಿ ಕ್ಯಾಂಡಿಡೇಟ್. ಯಾರು ಅಭ್ಯರ್ಥಿ ಇಲ್ಲವೆಂದು ಹಣ ಮಾಡಿಕೊಂಡಿರುವವರನ್ನು ಅಯ್ಕೆ ಮಾಡಿ ಬಿಟ್ಟಿದ್ದಾರೆ. ಇವರಿಂದ ಅಭಿವೃದ್ದಿ ಸಾದ್ಯವಿಲ್ಲವೆಂದರು. ಚುನಾವಣೆಗೆ ಎರಡು ದಿನವಿದ್ದಾಗ ರಾತ್ರಿ ಮನೆಗೆ ಬರುವ ಅಭ್ಯರ್ಥಿ ಮುಖ ನೋಡಬೇಡಿ. ಅಭಿವೃದ್ದಿ ಕೆಲಸ ಮಾಡುವ, ರೈತರಿಗೆ ಪ್ರೋತ್ಸಾಹ ನೀಡುವ ಹೆಬ್ಬಾರ್ ಅವರನ್ನು ಬೆಂಬಲಿಸಿ ಮನವಿ ಮಾಡಿದರು.
ಸಮ್ಮಿಶ್ರ ಸರ್ಕಾರದಲ್ಲಿ ರೈತರಿಗೆ ಸೇರಬೇಕಿದ್ದ ಹಣವನ್ನು ಒದಗಿಸಿಲ್ಲ. ರೈತರ ಹಣ ಮಂಡ್ಯ, ಹಾಸನಕ್ಕೆ ಹಾಕಿದ್ದು ಬಿಟ್ರೆ ಬೇರೇನು ಸಾಧನೆಯಿಲ್ಲ. ಕೆಲವೊಮ್ಮೆ ಅನಿವಾರ್ಯ ಕಾರಣಗಳಿಂದ ಕಠಿಣ ನಿರ್ದಾರಗಳನ್ನು ತೆಗೆದುಕೊಳ್ಳಬೇಕಗುತ್ತದೆ. ರಾಜ್ಯವನ್ನು ಬಿಜೆಪಿ ತೆಕ್ಕೆಗೆ ಹಾಕಿಲ್ಲವೆಂದರೆ ರಾಜ್ಯ ಉದ್ಧಾರ ಅಗುವುದಿಲ್ಲವೆಂದು ಮನಗಂಡು ಶಿವರಾಮ್ ಹೆಬ್ಬಾರ್ ರಾಜೀನಾಮೆ ನೀಡಿ ಬಿಜೆಪಿ ಸೇರ್ಪಡೆಯಾಗಿದ್ದಾರೆ ಎಂದರು.