Sunday, December 22, 2024

ಗೋಪಾಲಯ್ಯ ಜೊತೆ ಪತ್ನಿ ಹೇಮಲತಾ ನಾಮಪತ್ರ ಸಲ್ಲಿಕೆ!

ಬೆಂಗಳೂರು : ರಾಜ್ಯದಲ್ಲಿ ಉಪ ಚುನಾವಣಾ ಕಣ ರಂಗೇರುತ್ತಿದ್ದು, ನಾಮಪತ್ರ ಸಲ್ಲಿಕೆಯ ಕೊನೇ ದಿನವಾದ ಇಂದು ನಾಮಪತ್ರ ಸಲ್ಲಿಕೆ ಭರಾಟೆ ಜೋರಾಗಿದೆ. ಅಂತೆಹಯೇ ಮಹಾಲಕ್ಷ್ಮೀ ಲೇಔಟ್​ ಕ್ಷೇತ್ರದಿಂದ ಅನರ್ಹ ಶಾಸಕ ಗೋಪಾಲಯ್ಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ. ಅವರೊಡನೆ ಪತ್ನಿ ಹೇಮಲತಾ ಗೋಪಾಲಯ್ಯ ಕೂಡ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. 
ಭಾರೀ ಲೆಕ್ಕಾಚಾರ ಮಾಡಿ ಗೋಪಾಲಯ್ಯ ಪತ್ನಿಯಿಂದಲೂ ನಾಮಪತ್ರ ಸಲ್ಲಿಸಿದ್ದಾರೆ. ಮುಂಜಾಗ್ರತೆ ಹಾಗೂ ತಾಂತ್ರಿಕ ತೊಂದ್ರೆ ಆಗಬಾರದು ಎಂದು ಗೋಪಾಲಯ್ಯ ಈ ಕ್ರಮ ತೆಗೆದುಕೊಂಡಿದ್ದಾರೆ. ರಣಕಣದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಹಿನ್ನಡೆ ಗೋಚರಿಸಿದ್ರೆ ಪತ್ನಿಯನ್ನು ಕಣಕ್ಕಿಳಿಸಲು ಅನರ್ಹಶಾಸಕರು ಚಿಂತನೆ ನಡೆಸಿದ್ದಾರೆ.

RELATED ARTICLES

Related Articles

TRENDING ARTICLES