Wednesday, January 22, 2025

‘ಶನಿಮಹಾತ್ಮ ಬಿಜೆಪಿ ಹೆಗಲೇರಿದ್ದಾನೆ’ : ಸಿದ್ದರಾಮಯ್ಯ ಭವಿಷ್ಯ

ಮೈಸೂರು : ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಎಂದಿನ ಶೈಲಿಯಲ್ಲಿ ಬಿಜೆಪಿ ಹಾಗೂ ಸಿಎಂ ಬಿ ಎಸ್ ಯಡಿಯೂರಪ್ಪ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಸುದ್ದಿಗಾರರೊಂದಿಗೆ ಶನಿವಾರ ಮಾತನಾಡಿದ ಅವರು, ಶನಿಮಹಾತ್ಮ ಬಿಜೆಪಿ ಹೆಗಲೇರಿದ್ದಾನೆ. ಬೈ ಎಲೆಕ್ಷನ್​ನಲ್ಲಿ ಬಿಜೆಪಿ ಕನಿಷ್ಠ 8 ಸ್ಥಾನ ಕೂಡ ಗೆಲ್ಲಲ್ಲ ಎಂದು ಭವಿಷ್ಯ ನುಡಿದರು.
ನೀತಿ ಸಂಹಿತೆ ಬರಲ್ವಾ? : ಅನರ್ಹರನ್ನು ಸಚಿವರನ್ನಾಗಿ ಮಾಡುವೆ ಎಂದು ಯಡಿಯೂರಪ್ಪ ಹೇಳಿದ್ದಾರೆ. ಈ ಹೇಳಿಕೆಗಳೆಲ್ಲಾ ಚುನಾವಣಾ ನೀತಿಸಂಹಿತೆ ವ್ಯಾಪ್ತಿಗೆ ಬರುವುದಿಲ್ಲವೇ? ಬಿಜೆಪಿಗೆ ಯಾವುದೇ ನೀತಿ ಸಂಹಿತೆ ಅಡ್ಡಿಯಾಗುವುದಿಲ್ಲವೇ? ಎಂದು ಪ್ರಶ್ನಿಸಿದರು.
ಕಳಂಕ ಎಂದಿಗೂ ಹೋಗಲ್ಲ : ಸುಪ್ರೀಂಕೋರ್ಟ್​ ತೀರ್ಪು ಹೊರಬಿದ್ದ ಬಳಿಕ ಒಬ್ಬೊಬ್ಬರಾಗಿ ಎಲ್ಲರೂ ಆಪರೇಷನ್​ ಕಮಲದ ಕುರಿತು ಬಾಯಿ ಬಿಡ್ತಿದ್ದಾರೆ. ಅವರೇನೇ ಹೇಳಿದರೂ ಅವರಿಗಂಟಿರುವ ಅನರ್ಹತೆಯ ಪಟ್ಟ ಹೋಗಲ್ಲ. ರಮೇಶ್​ ಜಾರಕಿಹೊಳಿಯ ಮಾತಿಗೆ ಕವಡೆ ಕಾಸಿನ ಕಿಮ್ಮತ್ತಿಲ್ಲ, ಅನರ್ಹರಾಗಿರುವ ಕಾರಣ ಏನೇನೋ ಮಾತನಾಡುತ್ತಿದ್ದಾರೆ ಎಂದು ಹೇಳಿದರು.

RELATED ARTICLES

Related Articles

TRENDING ARTICLES