Monday, May 20, 2024

ಬೈ ಎಲೆಕ್ಷನ್​ಗೆ ಸ್ಫೋಟಕ ಟ್ವಿಸ್ಟ್ : ಮರಳಿ ಹಳೆಯ ಗೂಡಿಗೆ ಅನರ್ಹ ಶಾಸಕ?

ರಾಜ್ಯದಲ್ಲೀಗ ಬೈ ಎಲೆಕ್ಷನದ್ದೇ ಸೌಂಡು. ದಿನದಿಂದ ದಿನಕ್ಕೆ ಎಲೆಕ್ಷನ್ ಗ್ರೌಂಡ್ ರಂಗೇರುತ್ತಿದೆ. ರಾಜ್ಯ ರಾಜಕಾರಣದಲ್ಲಿ ದಿಢೀರ್ ಬೆಳವಣಿಗೆಗಳು ನಡೀತಾ ಇವೆ. ಹಾಗೆಯೇ ಈ ನ್ಯೂಸ್ ಕೂಡ ರಾಜ್ಯ ರಾಜಕಾರಣದ ಸ್ಫೋಟಕ ಸುದ್ದಿ! ನಂಬಲು ಕಷ್ಟ ಅನಿಸಿದ್ರೂ ನಂಬಲೇ ಬೇಕಾದ ಸತ್ಯವಿದು. ಈ ಒಂದು ದಿಢೀರ್ ಬೆಳವಣಿಗೆ ಉಪ ಚುನಾವಣೆಗೆ ಟ್ವಿಸ್ಟ್​ ಕೊಡೋದಂತು ಪಕ್ಕಾ!
ಹೌದು, ಅನರ್ಹ ಶಾಸಕ ರೋಷನ್ ಬೇಗ್ ದಿಢೀರನೆ ತನ್ನ ಹಳೆಯ ಗೂಡಿಗೆ ಸೇರ್ತಿದ್ದಾರೆ ಎಂದು ಹೇಳಲಾಗುತ್ತಿದ್ದು, ಮಾಜಿ ಸಚಿವ ಹೆಚ್​ ಡಿ ರೇವಣ್ಣ ನೀಡಿರುವ ಹೇಳಿಕೆ ಸುದ್ದಿ ಪಕ್ಕಾ ಎನ್ನುತ್ತಿದೆ. ಬಿಜೆಪಿಯಿಂದ ಶಿವಾಜಿನಗರ ಕ್ಷೇತ್ರದ ಟಿಕೆಟ್ ಸಿಗುತ್ತೆ ಅನ್ನೋ ನಿರೀಕ್ಷೆಯಲ್ಲಿದ್ದ ರೋಷನ್​ ಬೇಗ್​ಗೆ ನಿರಾಶೆಯಾಗಿದೆ. ಬಿಜೆಪಿ ರೋಷನ್ ಬೇಗ್ ಬದಲಿಗೆ ಎಂ ಶರವಣಗೆ ಟಿಕೆಟ್ ನೀಡಿದೆ. ಬಿಜೆಪಿ ಟಿಕೆಟ್ ಕೈತಪ್ಪಿದ್ದರಿಂದ ಬೇಸರಗೊಂಡಿರೋ ರೋಷನ್ ಬೇಗ್ ತನ್ನ ಹಳೆಯ ಗೂಡು ಜೆಡಿಎಸ್​ಗೆ ಮರಳಲಿದ್ದಾರೆ ಎಂದು ಹೇಳಲಾಗುತ್ತಿದೆ.
ಹೊಳೆನರಸೀಪುರದಲ್ಲಿ ರೋಷನ್ ಬೇಗ್ ಮಾಜಿ ಸಚಿವ ಹೆಚ್​.ಡಿ ರೇವಣ್ಣ ಅವ್ರನ್ನ ಭೇಟಿ ಮಾಡಿ, ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ. ಇಬ್ಬರು ಜ್ಯೋತಿಷಿಗಳೊಂದಿಗೆ ತೆರಳಿ ಬೇಗ್ ರೇವಣ್ಣ ಜೊತೆ ಚರ್ಚಿಸಿದ್ದು, ಶಿವಾಜಿನಗರ ಬಿಜೆಪಿ ಟಿಕೆಟ್ ತಪ್ಪಿದ್ದಕ್ಕೆ ಜೆಡಿಎಸ್​ನಿಂದ ಕಣಕ್ಕಿಳಿಯುತ್ತಾರೆ ಎಂಬ ಚರ್ಚೆ ರಾಜಕೀಯ ಪಡಸಾಲೆಯಲ್ಲಿ ಕೇಳಿಬರ್ತಿದೆ. 

ರೇವಣ್ಣ ಸ್ವಾಗತ :  ಇನ್ನು ಹೆಚ್​ ಡಿ ರೇವಣ್ಣ ರೋಷನ್ ಬೇಗ್ ಗುಣಗಾನ ಮಾಡಿದ್ದಾರೆ. ಹೊಳೆನರಸೀಪುರದಲ್ಲಿ ಮಾತನಾಡಿದ ಅವರು, ರೋಷನ್ ಬೇಗ್ ಬಗ್ಗೆ ನಂಗೆ ಅಪಾರ ಗೌರವ ಇದೆ. ದೇವೇಗೌಡರು ಸಿಎಂ ಆಗಿದ್ದಾಗ ಬೇಗ್ ನಮ್ಮ ಜೊತೆಯಲ್ಲೇ ಇದ್ದರು. ಅನಿವಾರ್ಯ ಕಾರಣಗಳಿಂದ ಕಾಂಗ್ರೆಸ್​ಗೆ ಹೋದ್ರು. ಕಾಂಗ್ರೆಸ್​ನವರು ಅವರನ್ನು ಸರಿಯಾಗಿ ನಡೆಸಿಕೊಳ್ಳಲಿಲ್ಲ ಎಂದಿದ್ದಾರೆ.
ಅಷ್ಟೇ ಅಲ್ಲದೆ ಅವರು ಉಪ ಚುನಾವಣೆಗೆ ನಿಂತು ಗೆದ್ದರೆ ಸಂತೋಷ. ಜೆಡಿಎಸ್ ಬಿಟ್ಟು ಹೋದ್ಮೇಲೆ ಅವರು HDD, HDK ಬಗ್ಗೆ ಏನು ಮಾತಾಡಿಲ್ಲ. ಜೆಡಿಎಸ್​ಗೆ ಬಂದರೆ ಸ್ವಾಗತ. ಸರ್ಕಾರ ಬೀಳಿಸಲು ಷಡ್ಯಂತ್ರ ನಡೆಯುತ್ತಿದೆ ಎಂದು ಹೇಳಿದವರೇ ಬೇಗ್ . ಪ್ರಾಮಾಣಿಕವಾಗಿ ನಮ್ಮ ಮನೆಗೇ ಬಂದು ಹೇಳಿದ್ರು ಎಂದು ತಿಳಿಸಿದ್ದಾರೆ. ರೇವಣ್ಣ ಹೇಳಿಕೆ ಬೇಗ್ ತೆನೆ ಹೊರಲು ರೆಡಿಯಾಗಿದ್ದಾರೆ ಅನ್ನೋದನ್ನು ಬಲಪಡಿಸುವಂತಿದ್ದು, ಏನೆಲ್ಲಾ ಆಗುತ್ತೆ ಕಾದುನೋಡ್ಬೇಕಿದೆ.

RELATED ARTICLES

Related Articles

TRENDING ARTICLES