ಮೈಸೂರು : ರಾಜ್ಯ ದಲ್ಲಿ ನಡೆದಿರುವ ಎಲ್ಲಾ ಬೆಳವಣಿಗೆಗೆ ಚಾಮರಾಜನಗರ ಸಂಸದ ವಿ. ಶ್ರೀನಿವಾಸ್ ಪ್ರಸಾದ್ ಕಾರಣವಂತೆ! ಹೀಗಂದಿದ್ದು ನಿನ್ನೆಯಷ್ಟೇ ಅಧಿಕೃತವಾಗಿ ಬಿಜೆಪಿ ಸೇರಿದ ಮಾಜಿ ಜೆಡಿಎಸ್ ರಾಜ್ಯಾಧ್ಯಕ್ಷ, ಅನರ್ಹ ಶಾಸಕ ಹೆಚ್ ವಿಶ್ವನಾಥ್!
ಚಾಮುಂಡಿ ಬೆಟ್ಟದಲ್ಲಿ ಪೂಜೆ ಸಲ್ಲಿಸಿ ಅಲ್ಲಿಂದ ನೇರವಾಗಿ ಮೈಸೂರು ಜಿಲ್ಲಾ ಬಿಜೆಪಿ ಕಚೇರಿಗೆ ಆಗಮಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ ರಾಜ್ಯದ ಇಷ್ಟೆಲ್ಲಾ ಬೆಳವಣಿಗೆಗೆ ಶ್ರೀನಿವಾಸ್ ಪ್ರಸಾದ್ ಅವರೇ ಕಾರಣ. ಶ್ರೀನಿವಾಸ್ ಪ್ರಸಾದ್ ಅವರ ಮುಖಾಂತರ ಯಡಿಯೂರಪ್ಪ ನನ್ನನ್ನು ಬಿಜೆಪಿಗೆ ಆಹ್ವಾನಿಸಿದರು. ಜೆಡಿಎಸ್ ಬಿಟ್ಟು ಬಿಜೆಪಿಯನ್ನು ಅಧಿಕಾರಕ್ಕೆ ತರುವಂತೆ ಕೇಳಿಕೊಂಡರು . ಶ್ರೀನಿವಾಸ್ ಪ್ರಸಾದ್ ಅವರನ್ನು ಹೊರತುಪಡಿಸಿ ಬೇರೆ ಯಾರು ಕೇಳಿದ್ದರೂ ನಾನದಕ್ಕೆ ಒಪ್ಪುತ್ತಿರಲಿಲ್ಲ ಎಂದು ಹೇಳಿದರು.
ಜಗತ್ತೇ ಅಭಿವೃದ್ಧಿಯ ಕಡೆಗೆ ಮುಖ ಮಾಡಿರುವಾಗ ನಾನೊಬ್ಬ ಯಾಕೆ ಸುಮ್ಮನಿರಲಿ ? ಭಾರತ ದೇಶ ಇಂದು ಅಭಿವೃದ್ಧಿಯ ಕಡೆಗೆ ಹೋಗುತ್ತಿದೆ. ಆ ಆಭಿವೃದ್ಧಿಯಲ್ಲಿ ನಾನೂ ಕೈಜೋಡಿಸಲು ಇಚ್ಛಿಸುತ್ತಿದ್ದೇನೆ. ಹಾಗಾಗಿ ಈ ಕನಕ ಜಯಂತಿಯಂದು ನಾನೂ ಮತ್ತು ವಿಜಯ್ ಶಂಕರ್ ಇಬ್ಬರು ಕನಕರು ಬಿಜೆಪಿ ಮನೆಗೆ ಬಂದಿದ್ದೇವೆ ಎಂದರು.
ರಾಜ್ಯದ ಇಷ್ಟೆಲ್ಲಾ ಬೆಳವಣಿಗೆಗೆ ಸಂಸದ ಶ್ರೀನಿವಾಸ ಪ್ರಸಾದ್ ಕಾರಣವಂತೆ!
TRENDING ARTICLES