ಟೀಮ್ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ ಥರ ಆಗ್ಬೇಕು ಅನ್ನೋದು ಎಷ್ಟೋ ಮಕ್ಕಳ ಮಹದಾಸೆ. ನನ್ನ ಮಗ/ ಮಗಳು ಕೊಹ್ಲಿಯಂತೆ ಸ್ಟಾರ್ ಆಗ್ಬೇಕು ಅಂತ ಅದೆಷ್ಟೋ ತಂದೆ-ತಾಯಿ ಕನಸು ಕಂಡಿದ್ದಾರೆ. ಅಂತೆಯೇ ಆಸ್ಟ್ರೇಲಿಯಾದ ಸ್ಟಾರ್ ಕ್ರಿಕೆಟಿಗ ಡೇವಿಡ್ ವಾರ್ನರ್ ಮಗಳಿಗೂ ವಿರಾಟ್ ಕೊಹ್ಲಿಯಂತೆ ಆಗೋ ಆಸೆ!
ಹೌದು ಡೇವಿಡ್ ವಾರ್ನರ್ ಪತ್ನಿ ಕ್ಯಾಂಡಿಸ್ ವಾರ್ನರ್ ಟ್ವಿಟರ್ನಲ್ಲಿ ವಿಡಿಯೋವೊಂದನ್ನು ಪೋಸ್ಟ್ ಮಾಡಿದ್ದಾರೆ. ಈ ವಿಡಿಯೋದಲ್ಲಿ ವಾರ್ನರ್ ಪುತ್ರಿ ಐವಿ `ನಾನು ವಿರಾಟ್ ಕೊಹ್ಲಿ’ ಅಂತ ಹೇಳಿ ಬ್ಯಾಟ್ ಬೀಸಿದ್ದಾಳೆ. ಈ ಪುಟ್ಟಿ ಭಾರತದಲ್ಲಿ ಹೆಚ್ಚು ಸಮಯ ಕಳೆದಿದ್ದಾಳೆ. ಈಗ ವಿರಾಟ್ ಕೊಹ್ಲಿ ಆಗ್ಬೇಕು ಅಂತಿದ್ದಾಳೆ ಅಂತ ಕ್ಯಾಂಡಿಸ್ ವಿಡಿಯೋಕ್ಕೆ ಕ್ಯಾಪ್ಷನ್ ಕೊಟ್ಟಿದ್ದಾರೆ.
This little girl has spent too much time in India. Wants to be @imVkohli pic.twitter.com/Ozc0neN1Yv
— Candice Warner (@CandiceWarner31) November 10, 2019