Monday, December 23, 2024

ಪತ್ನಿಗೆ ಶೂಟ್ ಮಾಡ್ತೀನಿ ಅಂತ ವಾರ್ನಿಂಗ್ ಮಾಡಿದ ಯುವರಾಜ್ ಸಿಂಗ್!

ಹೆಡ್​​ಲೈನ್ ನೋಡಿ.. ಏನಪ್ಪಾ ಇದು? ನಮ್ ಯುವರಾಜ್ ಸಿಂಗ್ ಹೀಗೆ ಮಾಡ್ತಾರಾ? ಛೇ.. ಅವ್ರು ಪಾಪ ರೀ..ಹೆಂಡ್ತಿನ್ನ ಜೀವಕ್ಕಿಂತ ಹೆಚ್ಚು ಪ್ರೀತಿಸ್ತಾರೆ. ನೀವೇನ್ ಹೀಗೆ ಹೇಳ್ತಿದ್ದೀರಾ ಅಂತಿದ್ದೀರಾ?
ಮಾಜಿ ಕ್ರಿಕೆಟಿಗ ಯುವಿ ಹೆಂಡ್ತೀನ ಶೂಟ್ ಮಾಡ್ತೀನಿ ಅಂದಿರೋದು ಹೌದು! ಸ್ವತಃ ಅವರೇ ಇನ್ಸ್ಟಾಗ್ರಾಮ್ ಪೋಸ್ಟ್​​ನಲ್ಲಿ ಹೇಳಿದ್ದಾರೆ. ಆದ್ರೆ, ಸೀರಿಯಸ್ ಆಗಿ ಹೇಳಿದ್ದಲ್ಲ ಪ್ರೀತಿಯಿಂದ ಹೇಳಿರೋದು!
ಹೌದು, ಯುವಿ ವರ್ಚುವಲ್ ರಿಯಾಲಿಟಿ ಸಾಧನಗಳನ್ನು ತೊಟ್ಟು ಶೂಟಿಂಗ್ ಗೇಮ್ ಆಡ್ತಾ, ವಿಭಿನ್ನ ಆ್ಯಕ್ಟಿಂಗ್ ಗಳನ್ನು ಮಾಡ್ತಿದ್ರು. ಈ ವೇಳೆ ಯುವಿ ಭಂಗಿಗಳನ್ನು ಪತ್ನಿ ಹಜೇಲ್ ಅನುಕರಣೆ ಮಾಡಿದ್ದಾರೆ. ಬಳಿಕ ಪತ್ನಿಯ ಮಕ್ಕಳಾಟವನ್ನು ಆಕೆ ಸೆರೆ ಹಿಡಿದಿದ್ದ ವಿಡಿಯೋದಲ್ಲಿ ನೋಡಿದ ಯುವಿ ಫಿದಾ ಆಗಿದ್ದು, ಆ ವಿಡಿಯೋವನ್ನು ಇನ್ಸ್ಟಾಗ್ರಾಮ್​ನಲ್ಲಿ ಪೋಸ್ಟ್ ಮಾಡಿ, ಇನ್ನೊಂದ್ಸಲ ನಂಗೆ ಹೀಗೆ ತೊಂದ್ರೆ ಕೊಟ್ರೆ ನಾನು ನಿನ್ನನ್ನು ವಾರ್​ ಗನ್ನಿಂದ ಶೂರ್ ಮಾಡ್ತೀನಿ ಎಂದು ಪ್ರೀತಿಯಿಂದ ಬರೆದುಕೊಂಡಿದ್ದಾರೆ.

https://www.instagram.com/p/B4f1UcIDwHH/?utm_source=ig_embed&utm_campaign=embed_video_watch_again

RELATED ARTICLES

Related Articles

TRENDING ARTICLES