Thursday, January 16, 2025

ಟ್ರೆಂಡಿಂಗಲ್ಲಿ #DhoniRetires..! ಧೋನಿ ಕ್ರಿಕೆಟಿಗೆ ನಿವೃತ್ತಿ ಘೋಷಿಸಿಯೇ ಬಿಟ್ರಾ?

ಟೀಮ್ ಇಂಡಿಯಾ ಮಾಜಿ ಕ್ಯಾಪ್ಟನ್ ಮಹೇಂದ್ರ ಸಿಂಗ್ ನಿವೃತ್ತಿ ಬಗ್ಗೆ ಸದ್ಯ ಸಿಕ್ಕಾಪಟ್ಟೆ ಚರ್ಚೆ ಆಗ್ತಿದೆ. ಇಂಗ್ಲೆಂಡಲ್ಲಿ ನಡೆದ ವರ್ಲ್ಡ್​ಕಪ್ ಬಳಿಕ ನಡೆದ ವೆಸ್ಟ್ ಇಂಡೀಸ್ ಮತ್ತು ಸೌತ್​ಆಫ್ರಿಕಾ ವಿರುದ್ಧದ ಸರಣಿಯಲ್ಲಿ ಧೋನಿ ಆಡಿಲ್ಲ. ಬಾಂಗ್ಲಾ ವಿರುದ್ಧದ ಸರಣಿಗೂ ಧೋನಿ ಆಯ್ಕೆಯಾಗಿಲ್ಲ. ಹೀಗಾಗಿ ಧೋನಿ ನಿವೃತ್ತಿ ಕುರಿತ ಚರ್ಚೆಗೆ ಬಲ ಬಂದಿದೆ. ಹೀಗಿರುವಾ ಟ್ವಿಟರ್​ನಲ್ಲಿ #DhoniRetires ಟ್ರೆಂಡಿಂಗಲ್ಲಿದೆ. #DhoniRetires ಸಿಕ್ಕಾಪಟ್ಟೆ ವೈರಲ್ ಆಗುತ್ತಿದ್ದು, ಯಾವಾಗಲೂ ದಿಢೀರ್ ನಿರ್ಧಾರ ತೆಗೆದುಕೊಳ್ಳುವ ಧೋನಿ ಸೈಲೆಂಟಾಗಿ ನಿವೃತ್ತಿ ಘೋಷಿಸಿ ಬಿಟ್ರಾ ಅಂತ ಅಭಿಮಾನಿಗಳು ಯೋಚಿಸ್ತಿದ್ದಾರೆ. ಇದು ಕೇವಲ ಗಾಳಿಸುದ್ದಿಯಾಗಿದ್ದು, ಧೋನಿ ನಿವೃತ್ತಿ ಬಗ್ಗೆ ಯಾವ್ದೇ ಅಧಿಕೃತ ನಿರ್ಧಾರ ತಿಳಿಸಿಲ್ಲ.

RELATED ARTICLES

Related Articles

TRENDING ARTICLES