Thursday, January 16, 2025

ಇವ್ರು ‘ವಾಟರ್​ ಬಾಯ್’ ಅಲ್ರೀ …ಪ್ರಧಾನಿ!

ಉನ್ನತ ಹುದ್ದೆ ಅಲಂಕರಿಸ್ತಾ ಹೋದಂತೆ ಕೆಲವರ ಗತ್ತು, ದವಲತ್ತು ಸಿಕ್ಕಾಪಟ್ಟೆ ಜೋರಾಗುತ್ತೆ. ಆ್ಯಟಿಟ್ಯೂಡ್ ಚೇಂಜಾಗಿ ಬಿಡುತ್ತೆ. ಚಿಕ್ಕಪುಟ್ಟ ಕೆಲಸಗಳನ್ನು ಮಾಡಲು ಹಿಂದೇಟು ಹಾಕ್ತಾರೆ. ಹೀಗಿರುವಾಗ ದೇಶದ ಪ್ರಧಾನಿ ಒಬ್ರು ಮೈದಾನದಲ್ಲಿ ಆಟಗಾರರಿಗೆ ನೀರು, ಕ್ಲೋಲ್ಡ್ ಡ್ರಿಂಕ್ಸ್ ತಂದು ಕೊಡೋ ‘ವಾಟರ್ ಬಾಯ್’ ಕೆಲಸ ಮಾಡ್ತಾರೆ ಅಂದ್ರೆ ಯಾರ್ರಿ ರೀ ನಂಬೋಕೆ ಆಗುತ್ತೆ…!? ಆದ್ರೆ, ಆಸ್ಟ್ರೇಲಿಯಾ ಪ್ರಧಾನಿ ವಾಟರ್ ಬಾಯ್ ಆಗಿ ಕಾಣಿಸಿಕೊಂಡು ಎಲ್ಲರನ್ನೂ ಚಕಿತರನ್ನಾಗಿ ಮಾಡಿದ್ದಾರೆ!
ಭಾನುವಾರದಿಂದ ಶ್ರೀಲಂಕಾ ಮತ್ತು ಆಸ್ಟ್ರೇಲಿಯಾ ನಡುವೆ 3ಮ್ಯಾಚುಗಳ ಟಿ20 ಸರಣಿ ನಡೆಯಲಿದೆ. ಈ ಟೂರ್ನಿಗೂ ಮುನ್ನ ಶ್ರೀಲಂಕಾ ಜ್ಯೂನಿಯರ್ ಆಸೀಸ್​ ತಂಡ ಪ್ರೈಮ್ ಮಿನಿಸ್ಟರ್ ಇಲೆವೆನ್ ಮತ್ತು ಲಂಕಾ ನಡುವೆ ಪ್ರಾಕ್ಟಿಸ್ ಮ್ಯಾಚ್ ನಡೆಯಿತು. ಈ ಮ್ಯಾಚಲ್ಲಿ ಮೊದಲು ಬ್ಯಾಟಿಂಗ್​ ಮಾಡಿದ ಲಂಕಾದ ದಸುನ್ ಶನಕಾ ವಿಕೆಟ್​ ಬಿದ್ದೊಡನೆ ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್ ಮಾರಿಸನ್ ತಂಡದ ಕ್ಯಾಪ್ ಧರಿಸಿಕೊಂಡು ಮೈದಾನಕ್ಕೆ ಡ್ರಿಂಕ್ಸ್ ತೆಗೆದುಕೊಂಡು ಹೋದರು. ಅದನ್ನು ಕಂಡು ಆಟಗಾರರಿಗೆ ಆಶ್ಚರ್ಯವಾಯ್ತು. ವಾಟರ್ ಬಾಯ್ ಕೆಲಸ ಮಾಡಿ ಆಟಗಾರರನ್ನು ಹುರಿದುಂಬಿಸಿದ ಪ್ರಧಾನಿ ಬಗ್ಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಕೆಲವು ಹಿರಿಯ ಆಟಗಾರರೇ ಡಿಂಕ್ಸ್ ತಗೊಂಡು ಮೈದಾನಕ್ಕೆ ಹೋಗುವುದಕ್ಕೆ ಹಿಂದೆ-ಮುಂದೆ ನೋಡ್ತಾರೆ. ಅಂತದ್ರಲ್ಲಿ ಪ್ರಧಾನಿ ಸ್ಕಾಟ್ ಮಾರಿಸನ್ ಆ ಕೆಲಸ ಮಾಡಿದ್ದು ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡ್ತಾ ಇದೆ. ಇನ್ನು ಈ ಮ್ಯಾಚಲ್ಲಿ ಪ್ರೈಮ್ ಮಿನಿಸ್ಟರ್ಸ್ ಇಲೆವೆನ್ ಪ್ರವಾಸಿ ಶೀಲಂಕಾವನ್ನು 1 ವಿಕೆಟಿನಿಂದ ಸೋಲಿಸಿದೆ.

RELATED ARTICLES

Related Articles

TRENDING ARTICLES