Friday, January 24, 2025

ಬಿಸಿಸಿಐನಲ್ಲಿ ‘ದಾದಾ’ ಗಿರಿ 9 ತಿಂಗಳು ಮಾತ್ರ! ಇಲ್ಲಿದೆ ಅಸಲಿ ಕಾರಣ

ಟೀಮ್ ಇಂಡಿಯಾ ಮಾಜಿ ಕ್ಯಾಪ್ಟನ್ ಸೌರವ್​ ಗಂಗೂಲಿ ಬಿಸಿಸಿಐ ನೂತನ ಅಧ್ಯಕ್ಷರಾಗಿ ನಿನ್ನೆಯಷ್ಟೇ ಅಧಿಕಾರದ ಚುಕ್ಕಾಣಿ ಹಿಡಿದಿದ್ದಾರೆ. ಬಂಗಾಳದ ಹುಲಿ ಬಿಸಿಸಿಐ ಅಧ್ಯಕ್ಷರಾಗಿದ್ದು ಭಾರತೀಯ ಕ್ರಿಕೆಟಿನ ಬದಲಾವಣೆಯ ಪರ್ವಕಾಲ ಎಂದೇ ವಿಶ್ಲೇಷಿಸಲಾಗುತ್ತಿದೆ. ಆದರೆ, ಬಿಸಿಸಿಐನ 39ನೇ ಅಧ್ಯಕ್ಷರಾಗಿ ಅಧಿಕಾರವಹಿಸಿಕೊಂಡಿರುವ ಗಂಗೂಲಿ ಅಧಿಕಾರ ಅವಧಿ ಕೇವಲ 9 ತಿಂಗಳು ಮಾತ್ರ! ಅಷ್ಟಕ್ಕೂ ‘ದಾದಾ’ಗಿರಿ 9 ತಿಂಗಳಲ್ಲಿ ಮುಕ್ತಾಯವಾಗುವುದು ಏಕೆ ಅಂತೀರಾ? ಅದಕ್ಕೆ ಅಸಲಿ ಕಾರಣ ಇಲ್ಲಿದೆ.
ಲೋಧಾ ಸಮಿತಿ ಶಿಫಾರಸ್ಸಿನಂತೆ ಬಿಸಿಸಿಐ ಕೂಲಿಂಗ್ ಆಫ್ ನಿಯಮ ಜಾರಿಗೆ ತಂದಿದೆ. ಈ ನಿಯಮದ ಅನ್ವಯ ಬಿಸಿಸಿಐ ಅಥವಾ ಅದರ ಅಧೀನ ಸಂಸ್ಥೆಗಳಲ್ಲಿ ಒಟ್ಟಾರೆಯಾಗಿ 6 ವರ್ಷಗಳವರೆಗೆ ಮಾತ್ರ ಅಧಿಕಾರದಲ್ಲಿರಬಹುದು. ಬಳಿಕ ಅಧಿಕಾರದಿಂದ ಕೆಳಗಿಳಿದು ಮುಂದಿನ 3 ವರ್ಷ ಯಾವುದೇ ಅಧಿಕಾರ ಹೊಂದುವಂತಿಲ್ಲ. ಸೌರವ್​ ಗಂಗೂಲಿ ಬಿಸಿಸಿಐ ಅಡಿಯಲ್ಲಿರುವ ಬಂಗಾಳ ಕ್ರಿಕೆಟ್ ಅಸೋಷಿಯೇಷನ್​​ ಅಧ್ಯಕ್ಷರಾಗಿ 5.2 ವರ್ಷ ಪೂರೈಸಿರುವುದರಿಂದ 9 ತಿಂಗಳು ಮಾತ್ರ ಬಿಸಿಸಿಐ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಬಹುದು. ಹೀಗಾಗಿ 2020ರ ಜುಲೈನಲ್ಲಿ ಗಂಗೂಲಿ ‘ದಾದಾ’ಗಿರಿ ಅಂತ್ಯವಾಗಲಿದೆ.

RELATED ARTICLES

Related Articles

TRENDING ARTICLES