ಬಿಸಿಸಿಐ ನೂತನ ಅಧ್ಯಕ್ಷರಾಗಿ ಸೌರವ್ ಗಂಗೂಲಿ ಅಧಿಕಾರದ ಚುಕ್ಕಾಣಿ ಹಿಡಿಯುತ್ತಿದ್ದಂತೆ ಟೀಮ್ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ ಮತ್ತು ಮಾಜಿ ಕೋಚ್ ಅನಿಲ್ ಕುಂಬ್ಳೆ ನಡುವಿನ ಜಗಳಕ್ಕೆ ಹೊಸ ರೂಪ ಸಿಕ್ಕಿದೆ. ಬಿಸಿಸಿಐನ ಮಾಜಿ ಸಿಓಎ ವಿನೋದ್ ರಾಯ್ ತಾವು ಅಧಿಕಾದಿಂದ ಕೆಳಕ್ಕಿಳಿಯುತ್ತಿದ್ದಂತೆ ಕ್ಯಾಪ್ಟನ್ ಕೊಹ್ಲಿ ಹಾಗೂ ಮಾಜಿ ಕೋಚ್ ಅನಿಲ್ ಕುಂಬ್ಳೆ ನಡುವಿನ ಜಗಳದ ಬಗ್ಗೆ ಒಂದಿಷ್ಟು ವಿಚಾರಗಳನ್ನು ಹೇಳಿದ್ದಾರೆ.
ತಮ್ಮ ಅಧಿಕಾರ ಅವಧಿಯಲ್ಲಿ ವಿನೋದ್ ರಾಯ್ ಅಂದಿನ ಕೋಚ್ ಅನಿಲ್ ಕುಂಬ್ಳೆಗೆ ಬೆಂಬಲ ಸೂಚಿಸಿದ್ದರು. ಆ ಬಗ್ಗೆ ಮಾತನಾಡಿರುವ ಅವರು, ಕುಂಬ್ಳೆ ಕೋಚ್ ಆಗಿ ಮುಂದುವರೆಯಬೇಕು ಎಂಬುದು ನನ್ನ ಆಸೆಯಾಗಿತ್ತು. ಆದ್ರೆ ಕ್ಯಾಪ್ಟನ್ ಕೊಹ್ಲಿಗೆ ಅನಿಲ್ ಕುಂಬ್ಳೆ ಇರುವುದು ಇಷ್ಟವಿರಲಿಲ್ಲ. ಕೊಹ್ಲಿ-ಕುಂಬ್ಳೆ ನಡುವಿನ ಮನಸ್ಥಾಪವನ್ನು ಶಮನ ಮಾಡಲು ಸಿಒಸಿ (ಕ್ರಿಕೆಟ್ ಅಡ್ವೈಸರಿ ಕಮಿಟಿ) ಸದಸ್ಯರು ಪ್ರಯತ್ನಿಸಿದ್ರು. ಕಮಿಟಿ ಸದಸ್ಯರಾದ ಮಾಜಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಮತ್ತು ಬಿಸಿಸಿಐನ ಹಾಲಿ ಅಧ್ಯಕ್ಷ ಸೌರವ್ ಗಂಗೂಲಿ ಕೊಹ್ಲಿ ಮನವೊಲಿಸುವ ಪ್ರಯತ್ನ ಮಾಡಿದ್ರೂ ಪ್ರಯೋಜನವಾಗಿಲ್ಲ. ಕೊಹ್ಲಿ ಸಚಿನ್, ಗಂಗೂಲಿ ಮಾತಿಗೂ ಬೆಲೆ ಕೊಡಲಿಲ್ಲ. ಕೊಹ್ಲಿ ನಡೆಯಿಂದ ಬೇಸರಗೊಂಡು ಕುಂಬ್ಳೆ ಹುದ್ದೆಯಿಂದ ಕೆಳಗಿಳಿಯಲು ನಿರ್ಧರಿಸಿದ್ರು ಅಂದಿದ್ದಾರೆ.
`ಗಂಗೂಲಿ, ಸಚಿನ್ ಮಾತಿಗೂ ಬೆಲೆ ಕೊಟ್ಟಿರ್ಲಿಲ್ಲ ಕ್ಯಾಪ್ಟನ್ ಕೊಹ್ಲಿ’!
TRENDING ARTICLES