ನವದೆಹಲಿ : ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯಲ್ಲಿ ಇಂದಿನಿಂದ ‘ದಾದಾ’ಗಿರಿ ಶುರುವಾಗಲಿದೆ. ಭಾರತ ಕ್ರಿಕೆಟಿಗೆ ಹೊಸ ಭಾಷ್ಯ ಬರೆದ ನಾಯಕ ಸೌರವ್ ಗಂಗೂಲಿ ಬಿಸಿಸಿಐನ 39ನೇ ಅಧ್ಯಕ್ಷರಾಗಿ ಇಂದು ಅಧಿಕಾರ ಸ್ವೀಕರಿಸಿದ್ದಾರೆ.
ಸುಪ್ರೀಂಕೋರ್ಟ್ ಈ ಮೊದಲು ನೇಮಿಸಿದ್ದ ಸಮಿತಿಯ 33 ತಿಂಗಳ ಅಧಿಕಾರವಧಿ ಮುಕ್ತಾಯದ ಹಿನ್ನೆಲೆಯಲ್ಲಿ ಹೊಸ ಸಮಿತಿ ರಚನೆಯಾಗಿದೆ. ಅಧ್ಯಕ್ಷ ಸ್ಥಾನಕ್ಕೆ ಬಂಗಾಳದ ಹುಲಿ, ದಾದಾ ಖ್ಯಾತಿಯ ಸೌರವ್ ಗಂಗೂಲಿ ಅವಿರೋಧ ಆಯ್ಕೆಯಾಗಿದ್ದು, ಇಂದು ಅಧಿಕೃತವಾಗಿ ಅಧಿಕಾರದ ಚುಕ್ಕಾಣಿ ಹಿಡಿದಿದ್ದಾರೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ಪುತ್ರ ಜೇ ಶಾ ನೂತನ ಕಾರ್ಯದರ್ಶಿಯಾಗಿ, ಉತ್ತರಖಂಡದ ಮಹೀಮ್ ವರ್ಮಾ ಉಪಾಧ್ಯಕ್ಷರಾಗಿ, ಬಿಸಿಸಿಐ ಮಾಜಿ ಅಧ್ಯಕ್ಷ ಅನುರಾಗ್ ಠಾಕೂರ್ ಸಹೋದರ ಅರುಣ್ ಧುಮಾಲ್ ಖಜಾಂಜಿ ಹಾಗೂ ಕೇರಳದ ಜಯೇಶ್ ಜಾರ್ಜ್ ಜಂಟಿ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದಾರೆ.