Wednesday, January 15, 2025

ರಾಂಚಿಯಲ್ಲೂ ರಾರಾಜಿಸಿದ ಕೊಹ್ಲಿ ಪಡೆ – ಸೌತ್ ಆಫ್ರಿಕಾ ವೈಟ್​ ವಾಶ್..!

ರಾಂಚಿ ಟೆಸ್ಟಿನಲ್ಲೂ ಟೀಮ್ ಇಂಡಿಯಾ ಭರ್ಜರಿ ಜಯ ದಾಖಲಿಸಿದ್ದು, ಪ್ರವಾಸಿ ಸೌತ್ ಆಫ್ರಿಕಾ ವೈಟ್​ ವಾಶ್ ಆಗಿ ತವರಿಗೆ ಮುಖಮಾಡಿದೆ.
2ನೇ ಟೆಸ್ಟಿನಂತೆ 3ನೇ ಮ್ಯಾಚಲ್ಲೂ ಕೊಹ್ಲಿ ಪಡೆ ಇನ್ನಿಂಗ್ಸ್ ದಿಗ್ವಜಯ ಸಾಧಿಸಿದೆ.
ಮೊದಲು ಬ್ಯಾಟಿಂಗ್ ಮಾಡಿದ ಕೊಹ್ಲಿ ಪಡೆ ರೋಹಿತ್ ಶರ್ಮಾ ಡಬಲ್ ಸೆಂಚುರಿ ಹಾಗೂ ಅಜಿಂಕ್ಯ ರಹಾನೆ ಶತಕದ ನೆರವಿನಿಂದ 497ರನ್ ಮಾಡಿತ್ತು. ಬಳಿಕ ತನ್ನ ಮೊದಲ ಇನ್ನಿಂಗ್ಸ್ ಆಡಿದ ಸೌತ್ ಆಫ್ರಿಕಾ ಭಾರತದ ದಾಳಿ ಎದುರಿಸಲಾಗದೆ ಕೇವಲ 162ರನ್​ ಗಳಿಗೆ ಸರ್ವಪತನ ಕಂಡಿತು. ಎರಡನೇ ಇನ್ನಿಂಗ್ಸ್​ನಲ್ಲೂ ನೀರಸ ಪ್ರದರ್ಶನ ನೀಡಿದ ಹರಿಣಗಳು 133ರನ್​ಗಳಿಗೆ ಆಲ್​​ಔಟ್ ಆಗುವುದರೊಂದಿಗೆ ಭಾರತ ಇನ್ನಿಂಗ್ಸ್ ಮತ್ತು 202ರನ್​ಗಳ ಜಯ ದಾಖಲಿಸುವಂತಾಯ್ತು.
ಸರಣಿಯಲ್ಲಿ ಅದ್ಭುತ ಪ್ರದರ್ಶನ ನೀಡಿದ ರೋಹಿತ್ ಶರ್ಮಾ ಮ್ಯಾನ್ ಆಫ್ ದಿ ಮ್ಯಾಚ್ ಮತ್ತು ಮ್ಯಾನ್​ ಆಫ್ ಸೀರಿಸ್ ಪ್ರಶಸ್ತಿ ಪಡೆದರು.

RELATED ARTICLES

Related Articles

TRENDING ARTICLES