Friday, January 24, 2025

ಇತಿಹಾಸದಲ್ಲಿ ಯಾರೂ ಮಾಡದ ವಿಶಿಷ್ಟ ದಾಖಲೆ ಮಾಡಿದ ರಹಾನೆ!

ಟೀಮ್ ಇಂಡಿಯಾದ ಸ್ಟಾರ್ ಬ್ಯಾಟ್ಸ್​ಮನ್ ಅಜಿಂಕ್ಯ ರಹಾನೆ ಕ್ರಿಕೆಟ್ ಇತಿಹಾಸದಲ್ಲಿ ಯಾರೂ ಯಾರೆಂದರೆ ಯಾರೂ ಇಲ್ಲಿಯವರೆಗೆ ಮಾಡದ ರೆಕಾರ್ಡ್ ಮಾಡಿದ್ದಾರೆ. ಟೆಸ್ಟ್ ಕ್ರಿಕೆಟಲ್ಲಿ ವಿಶ್ವದ ಯಾವೊಬ್ಬ ಆಟಗಾರನು ಮಾಡಿರದ ಸಾಧನೆಯನ್ನು ರಹಾನೆ ಮಾಡಿದ್ದಾರೆ.
ಇಲ್ಲಿಯವರೆಗೆ ರಹಾನೆ ಒಟ್ಟು 61 ಟೆಸ್ಟ್ ಮ್ಯಾಚುಗಳನ್ನಾಡಿದ್ದು, ಒಟ್ಟು 103 ಇನ್ನಿಂಗ್ಸ್​ಗಳಲ್ಲಿ ಬ್ಯಾಟ್ ಬೀಸಿದ್ದಾರೆ. ಆದರೆ, ಇಲ್ಲಿಯವರೆಗೆ ಒಂದೇ ಒಂದು ಬಾರಿ ಯಾವ ಎದುರಾಳಿ ತಂಡಕ್ಕೂ ರಹಾನೆಯನ್ನು ರನ್​ ಔಟ್ ಮಾಡಲಾಗಿಲ್ಲ. ಅಲ್ಲದೆ ರಹಾನೆ 200 ಜೊತೆಯಾಟಗಳಲ್ಲಿ ಭಾಗಿಯಾಗಿದ್ದ ಯಾವ ಒಬ್ಬ ಜೊತೆಗಾರನ ರನ್​ಔಟ್​ಗೂ ಕಾರಣವಾಗಿಲ್ಲ. ಹೀಗೆ ವಿಶೇಷ, ವಿಶಿಷ್ಟ ದಾಖಲೆಯನ್ನು ರಹಾನೆ ಮಾಡಿದ್ದಾರೆ.
ಸದ್ಯ ರಾಂಚಿಯಲ್ಲಿ ನಡೆಯುತ್ತಿರುವ ಸೌತ್ ಆಫ್ರಿಕಾ ವಿರುದ್ಧದ 3ನೇ ಟೆಸ್ಟಿನಲ್ಲಿ ರಹಾನೆ ಸೆಂಚುರಿ (115) ಸಿಡಿಸಿ ಮಿಂಚಿದ್ದಾರೆ.

RELATED ARTICLES

Related Articles

TRENDING ARTICLES