Wednesday, January 15, 2025

ತ್ರಿಬಲ್ ಸೆಂಚುರಿ ಸ್ಟಾರ್ ವೀರೂ ಬರ್ತ್​ಡೇಗೆ ಬಿಸಿಸಿಐ ಗಿಫ್ಟ್!

ಟೀಮ್ ಇಂಡಿಯಾದ ಮಾಜಿ ಕ್ರಿಕೆಟಿಗ. ಡೆಲ್ಲಿ ಡ್ಯಾಷರ್ ಖ್ಯಾತಿಯ ವೀರೇಂದ್ರ ಸೆಹ್ವಾಗ್ ಅವರಿಗಿಂದು ಹುಟ್ಟುಹಬ್ಬದ ಸಂಭ್ರಮ. ಭಾರತದ ಪರ ಆರಂಭಿಕರಾಗಿ ಕಣಕ್ಕಿಳಿದು ಮೊದಲ ಬಾಲಿನಿಂದಲೇ ಎದುರಾಳಿ ತಂಡದ ಬೌಲರ್​ಗಳ ಬೆವರಳಿಸುತ್ತಿದ್ದ ವೀರೂ ಟೆಸ್ಟ್​ ಕ್ರಿಕೆಟಿನಲ್ಲಿ ಎರಡು ತ್ರಿಶತಕ ಬಾರಿಸಿ ದಾಖಲೆ ನಿರ್ಮಿಸಿರುವ ತ್ರಿಬಲ್ ಸೆಂಚುರಿ ಸ್ಟಾರ್. 2004ರಲ್ಲಿ ಪಾಕಿಸ್ತಾನ ವಿರುದ್ಧ 309ರನ್ ಸಿಡಿಸಿದ್ದ ವೀರೂ 4 ವರ್ಷದ ಬಳಿಕ 2008ರಲ್ಲಿ ಸೌತ್ ಆಫ್ರಿಕಾ ವಿರುದ್ಧ 319ರನ್ ಬಾರಿಸಿದ್ದರು.
ವೀರೂ ಹುಟ್ಟುಹಬ್ಬದ ಪ್ರಯುಕ್ತ ಬಿಸಿಸಿಐ 2008ರಲ್ಲಿ ಸೆಹ್ವಾಗ್ ತ್ರಿಬಲ್ ಸೆಂಚುರಿ ಬಾರಿಸಿದ್ದ ಕ್ಷಣದ ವಿಡಿಯೋ ತುಣಕನ್ನು ಟ್ವಿಟರಿನಲ್ಲಿ ಪೋಸ್ಟ್​ ಮಾಡಿ ಹ್ಯಾಪಿ ಬರ್ತ್​ಡೇ ಮಿಸ್ಟರ್ ಟ್ರಿಪಲ್ ಸೆಂಚ್ಯೂರಿಯನ್ ಅಂತ ವಿಶ್ ಮಾಡಿದೆ.

RELATED ARTICLES

Related Articles

TRENDING ARTICLES