Wednesday, January 15, 2025

ಬ್ಯಾಟಿಂಗ್ನಲ್ಲಿ ವೇಗಿ ಉಮೇಶ್​ ಯಾದವ್ ಎರಡೆರಡು ರೆಕಾರ್ಡ್..!

ಸೌತ್ ಆಫ್ರಿಕಾ ವಿರುದ್ಧದ 3ನೇ ಟೆಸ್ಟ್ ಮ್ಯಾಚಲ್ಲೂ ಟೀಮ್ ಇಂಡಿಯಾದ್ದೇ ಅಬ್ಬರ..! ರೋಹಿತ್ ಶರ್ಮಾ ಡಬಲ್ ಸೆಂಚುರಿ (212), ಅಜಿಂಕ್ಯ ರಹಾನೆ ಸೆಂಚುರಿ (115), ಆಲ್​ ರೌಂಡರ್ ರವೀಂದ್ರ ಜಡೇಜಾ ಹಾಫ್ ಸೆಂಚುರಿ (51) ಸಿಡಿಸಿ ಮಿಂಚಿದ್ದು ಒಂದು ಕಡೆಯಾದ್ರೆ…ಫಾಸ್ಟ್​ ಬೌಲರ್ ಉಮೇಶ್ ಯಾದವ್ ಕೂಡ ಬ್ಯಾಟಿಂಗಿನಲ್ಲಿ ಅಬ್ಬರಿಸಿ ಹರಿಣಗಳಿಗೆ ಶಾಕ್ ನೀಡಿದ್ದಾರೆ. ಅಲ್ಲದೆ ಬ್ಯಾಟಿಂಗಿನಲ್ಲಿ ರೆಕಾರ್ಡ್ ಮಾಡಿದ್ದಾರೆ! ಅದು ಒಂದಲ್ಲ ಎರಡೆರಡು!
ಹೌದು ರಾಂಚಿ ಟೆಸ್ಟಿನಲ್ಲಿ ಉಮೇಶ್ ಯಾದವ್ 10 ಬಾಲ್​ಗಳಲ್ಲಿ 5 ಸಿಕ್ಸರ್ ಸಿಡಿಸಿದ್ದಾರೆ. ಒಟ್ಟು 10 ಬಾಲ್​ಗಳಲ್ಲಿ 31ರನ್ ಮಾಡಿದ ಯಾದವ್ ಟೆಸ್ಟ್​ನಲ್ಲಿ ಅತೀವೇಗವಾಗಿ 30ರನ್ ಬಾರಿಸಿದ ಪ್ಲೇಯರ್ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ. ಈ ಮೊದಲು ನ್ಯೂಜಿಲೆಂಡಿನ ಸ್ಟೀವನ್ ಫ್ಲೆಮಿಂಗ್ 31ರನ್ ಮಾಡಿದ್ದರು.
ಇನ್ನು ಎರಡನೇ ರೆಕಾರ್ಡೆಂದರೆ, 10ಕ್ಕೂ ಹೆಚ್ಚು ಬಾಲ್ ಆಡಿ, ಇನ್ನಿಂಗ್ಸ್ ಒಂದರಲ್ಲಿ ಅತೀ ಹೆಚ್ಚು ಸ್ಟ್ರೈಕ್​​ ರೇಟ್ ಹೊಂದಿರುವ ಪ್ಲೇಯರ್ ಎಂಬ ಹೆಗ್ಗಳಿಕೆಗೂ ಯಾದವ್​​ ಪಾತ್ರರಾಗಿದ್ದಾರೆ.

RELATED ARTICLES

Related Articles

TRENDING ARTICLES