Wednesday, January 15, 2025

ಕ್ಯಾಪ್ಟನ್​ ಕೊಹ್ಲಿಗೆ ಬಿಸಿಸಿಐ ನೂತನ ಅಧ್ಯಕ್ಷ ಗಂಗೂಲಿ ಬಿಗ್ ಟಾಸ್ಕ್​!

ಬಿಸಿಸಿಐ ನೂತನ ಅಧ್ಯಕ್ಷ ಬಂಗಾಳದ ಹುಲಿ ಸೌರವ್ ಗಂಗೂಲಿ ಟೀಮ್ ಇಂಡಿಯಾ ಕ್ಯಾಪ್ಟನ್​ ವಿರಾಟ್​ ಕೊಹ್ಲಿ ಹಾಗೂ ಟೀಮ್ ಇಂಡಿಯಾ ಮ್ಯಾನೇಜ್ಮೆಂಟಿಗೆ ಟಾಸ್ಕೊಂದನ್ನು ನೀಡಿದ್ದಾರೆ.
2013ರಲ್ಲಿ ಮಹೇಂದ್ರ ಸಿಂಗ್ ಧೋನಿ ನಾಯಕತ್ವದಲ್ಲಿ ಭಾರತ ಇಂಗ್ಲೆಂಡಿನಲ್ಲಿ ನಡೆದ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯನ್ನು ಗೆದ್ದಿತ್ತು. ಆ ಬಳಿಕ ಒಂದೇ ಒಂದು ಪ್ರಮುಖ ಸರಣಿಯನ್ನು ಗೆದ್ದಿಲ್ಲ ಎಂದು ಬೇಸರ ವ್ಯಕ್ತಪಡಿಸಿರುವ ಟೀಮ್ ಇಂಡಿಯಾ ಮಾಜಿ ನಾಯಕ, ಭಾರತೀಯ ಕ್ರಿಕೆಟಿಗೆ ಹೊಸ ಭಾಷ್ಯ ಬರೆದಿದ್ದ ಸೌರವ್ ಗಂಗೂಲಿ ಬೇಸರ ವ್ಯಕ್ತಪಡಿಸಿದ್ದಾರೆ. ಬಿಸಿಸಿಐನ ನೂತನ ಅಧ್ಯಕ್ಷರಾಗಿರುವ ಗಂಗೂಲಿ ಅ.23ರಂದು ಅಧಿಕಾರ ಸ್ವೀಕರಿಸಲಿದ್ದಾರೆ. ಈ ಬೆನ್ನಲ್ಲೇ ಕ್ಯಾಪ್ಟನ್ ಕೊಹ್ಲಿಗೆ ಟಾಸ್ಕ್ ನೀಡಿದ್ದಾರೆ. ಮುಂಬರುವ ಐಸಿಸಿ ಟೂರ್ನಿಗಳಲ್ಲಿ ಟೀಮ್ ಇಂಡಿಯಾ ಹೆಚ್ಚಿನ ಪ್ರಶಸ್ತಿಗಳನ್ನು ಗೆಲ್ಲುವ ಕಡೆಗೆ ಗಮನ ಹರಿಸಬೇಕು ಅಂತ ಹೇಳಿದ್ದಾರೆ.
ನಂಗೆ ಟೀಮ್ ಇಂಡಿಯಾ ದೊಡ್ಡ ಟೂರ್ನಿಗಳನ್ನು ಗೆಲ್ಲಬೇಕು ಎನ್ನೋದಿದೆ. ಎಲ್ಲಾ ಬಾರಿ ಟೂರ್ನಿ ಗೆಲ್ಲಲು ಆಗುವುದಿಲ್ಲ. ಆದ್ರೆ ಕಳೆದ 7 ಟೂರ್ನಿಗಳಲ್ಲಿ ಟೀಮ್ ಇಂಡಿಯಾ, ಒಂದೇ ಒಂದು ಟೂರ್ನಿಗಳನ್ನು ಗೆಲ್ಲಲು ಆಗಿಲ್ಲ ಎಂದು ಗಂಗೂಲಿ ಬೇಸರ ವ್ಯಕ್ತಪಡಿಸಿದ್ದಾರೆ.

RELATED ARTICLES

Related Articles

TRENDING ARTICLES