Sunday, May 11, 2025

ಹರ್ಭಜನ್ ಸಿಂಗ್ ಸಹಾಯ ಕೇಳಿದ ಬಿಸಿಸಿಐ ಅಧ್ಯಕ್ಷ ಗಂಗೂಲಿ!

ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿಗೆ ಟೀಮ್ ಇಂಡಿಯಾ ಆಫ್​​ ಸ್ಪಿನ್ನರ್ ಹರ್ಭಜನ್ ಸಿಂಗ್ ವಿಶ್ ಮಾಡಿದ್ದಾರೆ. ತನಗೆ ಶುಭ ಹಾರೈಸಿದ ಭಜ್ಜಿಯಲ್ಲಿ ಗಂಗೂಲಿ ಸಹಾಯ ಕೇಳಿದ್ದಾರೆ.
ಬೇರೆಯವರನ್ನು ನಾಯಕರನ್ನಾಗಿ ಬೆಳೆಸಿದ ನಾಯಕ ಎಂದು ಗಂಗೂಲಿ ಅವರನ್ನು ಗುಣಗಾನ ಮಾಡಿ ಬಿಸಿಸಿಐ ಅಧ್ಯಕ್ಷಗಾದಿಗೆ ಏರಿದಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ. ಹರ್ಭಜನ್ ಟ್ವೀಟಿಗೆ ಪ್ರತಿಕ್ರಿಯಿಸಿರುವ ಗಂಗೂಲಿ, ಧನ್ಯವಾದ ತಿಳಿಸಿದ್ದಾರೆ. ಅಲ್ಲದೆ ನೀವು ಒಂದು ತುದಿಯಲ್ಲಿ ನಿಂತು ಭಾರತವನ್ನು ಗೆಲ್ಲಿಸಿದ ಹಾಗೆ ಬಿಸಿಸಿಐ ಅಧ್ಯಕ್ಷನಾದ ನಂಗೂ ಸಹಾಯ ಮಾಡ್ಬೇಕು ಅಂತ ಮನವಿ ಮಾಡಿದ್ದಾರೆ. ಸೌರವ್ ಮತ್ತು ಭಜ್ಜಿ ಟ್ವೀಟ್ ಈಗ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡ್ತಿದೆ.

RELATED ARTICLES

Related Articles

TRENDING ARTICLES