ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಪಾರ ಅಭಿಮಾನಿಗಳನ್ನು ಹೊಂದಿರುವ ಸ್ಟಾಂಡಲ್ವುಡ್ನ ಸ್ಟಾರ್ ನಟ. ಕ್ಲಾಸ್ ಅಂಡ್ ಮಾಸ್ ಹೀರೋ ದಚ್ಚು ಅಂದ್ರೆ ಅಭಿಮಾನಿಗಳಿಗೆ ಅಚ್ಚುಮೆಚ್ಚು. ಈ ವರ್ಷ ಯಜಮಾನ, ಕುರುಕ್ಷೇತ್ರದಂಥಾ ಹಿಟ್ ಸಿನಿಮಾಗಳನ್ನು ಕೊಟ್ಟಿರೋ ಡಿ.ಬಾಸ್ ಸದ್ಯ ‘ರಾಬರ್ಟ್’ ಸಿನಿಮಾದಲ್ಲಿ ಬ್ಯುಸಿ ಇದ್ದಾರೆ. ‘ಒಡೆಯ’ ಸಿನಿಮಾ ರಿಲೀಸಿಗೆ ರೆಡಿಯಾಗಿದೆ.
ಇನ್ನು ದರ್ಶನ್ ಮೇಲಿನ ಅಭಿಮಾನವನ್ನು ಅಭಿಮಾನಿಗಳು ಟ್ಯಾಟೂ ಹಾಕಿಕೊಳ್ಳುವುದು ಸೇರಿದಂತೆ ನಾನಾ ರೀತಿಯಲ್ಲಿ ತೋರಿಸುತ್ತಾರೆ. ಈಗ ದರ್ಶನ್ ಸಿನಿಮಾ ಮೇಲಿನ ಕ್ರೇಜಿನಿಂದ ಅವರ ಚಿತ್ರಗಳಿಗೋ ಶರ್ಟ್ಸ್ಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಚಕ್ರವರ್ತಿ, ಬೃಂದಾವನ ಮೊದಲಾದ ಸಿನಿಮಾಗಳಲ್ಲಿ ದರ್ಶನ್ ಲುಕ್ ಒಳಗೊಂಡಿರುವ ಶರ್ಟ್ಸ್ ಮಾರುಕಟ್ಟೆಗೆ ಬಂದಿವೆ. ಈ ಶರ್ಟ್ಗಳಿಗೆ ಫಿದಾ ಆಗಿದ್ದಾರೆ ದರ್ಶನ್ ಫ್ಯಾನ್ಸ್.
ಮಾರುಕಟ್ಟೆಯಲ್ಲಿ ದರ್ಶನ್ ಶರ್ಟ್ಸ್ ಹವಾ.. !
TRENDING ARTICLES