ನವದೆಹಲಿ : ಸೋಶಿಯಲ್ ಮೀಡಿಯಾದಲ್ಲಿ ಹೇಗೆ ಬರೆಯಬೇಕು ಅಂತ ಪದವಿಯಲ್ಲಿ ಪಾಠ ಮಾಡಲಾಗುತ್ತದೆ..! ಯುಜಿಸಿ (ವಿವಿ ಧನಸಹಾಯ ಆಯೋಗ) ಪದವಿ ತರಗತಿಗಳಿಗೆ ‘ಜೀವನ ಕೌಶಲ್ಯ’ ಎಂಬ ಪಠ್ಯಕ್ರಮವನ್ನು ಅಳವಡಿಸಿದೆ. ಅದರಲ್ಲಿ ವಾಟ್ಸ್ಆ್ಯಪ್, ಫೇಸ್ಬುಕ್, ಟ್ವಿಟರ್ ಮೊದಲಾದ ಸೋಶಿಯಲ್ ಮೀಡಿಯಾದಲ್ಲಿ ಹೇಗೆ ಬರೆಯಬೇಕು ಅನ್ನೋದರ ಬಗ್ಗೆ ಪಾಠ ನೀಡಲಾಗಿದೆ.
ಸಾಮಾಜಿಕ ಮಾಧ್ಯಮಗಳಲ್ಲಿ ಹೇಗೆ ಬರೆಯಬೇಕು? ಹೇಗೆ ಸಂವಹನ ಮಾಡಬೇಕು ಎಂಬುದನ್ನು ಕಡೆಗಣಿಸಬಾರದು. ಇದು ಸಂವಹನಕ್ಕೆ ಉತ್ತಮ ಮಾಧ್ಯಮವಾಗಿರುವುದರಿಂದ ಈ ಬಗ್ಗೆ ಪಠ್ಯದಲ್ಲಿ ನೀಡಲಾಗಿದೆ. ಅಷ್ಟೇ ಅಲ್ಲದೆ ರೆಸ್ಯೂಮ್, ಬಯೋಡೆಟಾ ಹಾಗೂ ಕರಿಕ್ಯುಲಂ ವಿಟೆ ನಡುವಿನ ವ್ಯತ್ಯಾಸಗಳನ್ನು ಸಹ ತಿಳಿಸಿಕೊಡಲಾಗುತ್ತದೆ ಎಂದು ಯುಜಿಸಿ ಅಧಿಕಾರಿಯೊಬ್ಬರು ಹೇಳಿರುವುದಾಗಿ ವರದಿಯಾಗಿದೆ.
ವಾಟ್ಸ್ಆ್ಯಪ್, ಫೇಸ್ಬುಕ್, ಟ್ವಿಟರ್ನಲ್ಲಿ ಹೇಗೆ ಬರೆಯಬೇಕಂತ ಪದವಿ ಪಾಠ..!
TRENDING ARTICLES