ಕನ್ನಡ ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ ಬಿಗ್ಬಾಸ್ ಸೀಸನ್ 7 ಆರಂಭವಾಗಿದೆ. ಹೋಸ್ಟ್, ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ 18 ಮಂದಿ ಕಂಟೆಸ್ಟೆಂಟ್ಗಳನ್ನು ಬಿಗ್ಬಾಸ್ ಮನೆಯೊಳಗೆ ಕಳಿಸಿಕೊಟ್ಟರು.
18 ಸ್ಪರ್ಧಿಗಳಲ್ಲಿ ಪತ್ರಕರ್ತ ರವಿಬೆಳಗೆರೆ ಪ್ರಮುಖ ಆಕರ್ಷಣೆಯಾಗಿದ್ದರು. ಅಕ್ಷರ ಬ್ರಹ್ಮ, ಖ್ಯಾತ ವಾಗ್ಮಿ, ಅದ್ಭುತ ಬರಗಾರ ರವಿ ಬೆಳಗೆರೆ ಬಿಗ್ ಬಾಸ್ಗೆ ಹೋಗಿದ್ದರಿಂದ ಜನರ ನಿರೀಕ್ಷೆಯೂ ಬೆಟ್ಟದಷ್ಟಾಗಿತ್ತು. ರವಿ ಬೆಳೆಗೆರೆ ಬಿಗ್ಬಾಸ್ ಮನೆಯಲ್ಲಿ ಹೇಗಿರ್ತಾರೆ? ಟಾಸ್ಕ್ಗಳಲ್ಲಿ ಹೇಗೆ ಪಾಲ್ಗೊಳ್ಳುತ್ತಾರೆ? ಹೀಗೆ ಹತ್ತಾರು ಕುತೂಹಲಗಳು ಇದ್ದವು. ಬಿಗ್ಬಾಸ್ ಮನೆಯೊಳಗೆ ಹೋಗುವ ಮುನ್ನ ವೇದಿಕೆಯಲ್ಲಿ ಸುದೀಪ್ ಜೊತೆ ಜಾಲಿ ಜಾಲಿಯಾಗಿ ಮಾತಾಡಿದ್ದ ಅವರು, ಸುದೀಪ್ ಅವರನ್ನು ಹಾಡಿಹೊಗಳಿದ್ದರು.
ಬಿಗ್ಬಾಸ್ ಮನೆಯೊಳಗೆ ಪ್ರವೇಶಿಸುತ್ತಿದ್ದಂತೆ ಸಿಗರೇಟ್ ಕೇಳಿದ್ದರು. ಹಾಸ್ಯ ನಟ ಕುರಿಪ್ರತಾಪ್ ಜೊತೆ ಮನೆ ನೋಡುತ್ತಾ, ಕ್ಯಾಮರಾ ಮುಂದೆ, ಬಿಗ್ ಬಾಸ್ ನನ್ನ ಸಿಗರೇಟ್ ಎಲ್ಲಿ? ನೀವು ಇನ್ನೂ ಕಳಿಸಿಲ್ಲ ಎಂದಿದ್ದರು ಬೆಳಗೆರೆ. ಹೀಗೆ ಸಖತ್ ಜೋಶ್ನಲ್ಲಿ ಎಂಟ್ರಿಕೊಟ್ಟಿದ್ದ ಬೆಳಗೆರೆ ಬಿಗ್ಬಾಸ್ ಮನೆಯಲ್ಲಿ ಕಮಾಲ್ ಮಾಡ್ತಾರೆ ಅಂತ ಹೇಳಲಾಗಿತ್ತು. ಆದರೆ, ರವಿ ಬೆಳಗೆರೆ ಮೊದಲ ದಿನವೇ ಮನೆಯಿಂದ ಹೊರಬಂದಿದ್ದಾರೆ.
ಅನಾರೋಗ್ಯದ ಹಿನ್ನೆಲೆಯಲ್ಲಿ ಬೆಳಗೆರೆ ‘ದೊಡ್ಮನೆ’ಯಿಂದ ವಾಪಸ್ ಆಗಿದ್ದಾರೆ. ಬಿಗ್ಬಾಸ್ಗೆ ಎಂಟ್ರಿ ಕೊಡೋ ಮೊದಲು ನಾಲ್ಕು ದಿನಗಳ ಕಾಲ ಆಸ್ಪತ್ರೆಯಲ್ಲಿದ್ದರು. ಐಸಿಯುನಲ್ಲಿ ಚಿಕಿತ್ಸೆಗೆ ಒಳಗಾಗಿದ್ದರು. ಅನಾರೋಗ್ಯದ ಹೊರತಾಗಿಯೂ 1 ತಿಂಗಳು ಬಿಗ್ಬಾಸ್ ಮನೆಯಲ್ಲಿರುವ ವಿಶ್ವಾಸದಲ್ಲಿದ್ದರು. ಆದರೆ, ಚಿಕಿತ್ಸೆಗಾಗಿ ಒಂದೇ ದಿನಕ್ಕೆ ಅನಿವಾರ್ಯವಾಗಿ ಆಚೆ ಬಂದಿದ್ದಾರೆ.
Bigg Boss 7 : ಮೊದಲ ದಿನವೇ ‘ದೊಡ್ಮನೆ’ಯಿಂದ ಹೊರಬಂದ ರವಿ ಬೆಳಗೆರೆ..!
TRENDING ARTICLES