ಪುಣೆ : ದಕ್ಷಿಣ ಆಫ್ರಿಕಾ ವಿರುದ್ಧ ಭಾರತ ಇನ್ನಿಂಗ್ಸ್ ಮತ್ತು 137ರನ್ಗಳ ಭರ್ಜರಿ ಜಯ ದಾಖಲಿಸಿದೆ. ಇದರೊಂದಿಗೆ ಇನ್ನೂ ಒಂದು ಮ್ಯಾಚ್ ಬಾಕಿ ಇರುವಾಗಲೇ ದಕ್ಷಿಣ ಆಫ್ರಿಕಾ ಸೋಲುಂಡಿದೆ..
ಪುಣೆಯಲ್ಲಿ ನಡೆದ 2ನೇ ಟೆಸ್ಟ್ನಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ್ದ ಭಾರತ ಕ್ಯಾಪ್ಟನ್ ಕೊಹ್ಲಿ ಅಜೇಯ ದ್ವಿಶತಕ (254), ಕನ್ನಡಿಗ ಮಯಾಂಕ್ ಅಗರ್ವಾಲ್ ಶಕತ (108), ಟೆಸ್ಟ್ ಸ್ಪೆಷಲಿಸ್ಟ್ ಚೇತೇಶ್ವರ ಪೂಜಾರ (58), ಅಜಿಂಕ್ಯ ರಹಾನೆ (59), ಆಲ್ರೌಂಡರ್ ಜಡೇಜಾ (91) ಆಕರ್ಷಕ ಅರ್ಧಶತಕಗಳ ನೆರವಿನಿಂದ 601ರನ್ ಮಾಡಿ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತ್ತು.
ಇದಕ್ಕೆ ಉತ್ತರವಾಗಿ ತನ್ನ ಮೊದಲ ಇನ್ನಿಂಗ್ಸ್ ಆರಂಭಿಸಿದ ಸೌತ್ಆಫ್ರಿಕಾ ರವಿಚಂದ್ರನ್ ಅಶ್ವಿನ್ (4 ವಿಕೆಟ್) ಮತ್ತು ಇಶಾಂತ್ ಶರ್ಮಾ (3 ವಿಕೆಟ್) ದಾಳಿಗೆ ತತ್ತರಿಸಿ 275ರನ್ಗಳಿಗೆ ಆಲ್ಔಟ್ ಆಯಿತು. ಸೆಕೆಂಡ್ ಇನ್ನಿಂಗ್ಸ್ನಲ್ಲೂ ದ.ಆಫ್ರಿಕಾ ಬ್ಯಾಟ್ಸ್ಮನ್ಗಳ ಪೆವಿಲಿಯನ್ ಪೆರೇಡ್ ಮುಂದುವರೆಯಿತು. ರವೀಂದ್ರ ಜಡೇಜಾ (3 ವಿಕೆಟ್) , ಉಮೇಶ್ ಜಾಧವ್ (3 ವಿಕೆಟ್) ಮತ್ತು ರವಿಚಂದ್ರನ್ ಅಶ್ವಿನ್ (2 ವಿಕೆಟ್) ದಾಳಿಗೆ ಬ್ಯಾಟ್ ಬೀಸಲಾಗದೆ, ಕ್ರೀಸ್ನಲ್ಲಿ ನೆಲಯೂರಿ ಟೈಮ್ಪಾಸ್ ಮಾಡಲೂ ಆಗದೆ 189ರನ್ಗಳಿಗೆ ಆಲ್ಔಟ್ ಆಯಿತು. ಎರಡೂ ಸಲ ಬ್ಯಾಟಿಂಗ ಮಾಡಿದರೂ ಭಾರತ ಮೊದಲ ಇನ್ನಿಂಗ್ಸ್ನಲ್ಲಿ ಮಾಡಿದ್ದ ರನ್ ತಲುಪಲಾಗದೆ ಹೀನಾಯ ಸೋಲನುಭವಿಸಿತು.
ಭಾರತಕ್ಕೆ ಇನ್ನಿಂಗ್ಸ್ ಗೆಲುವು ; ಸರಣಿ ‘ಸೋತಾ’ಫ್ರಿಕಾ..!
TRENDING ARTICLES