Wednesday, January 15, 2025

ಡಾನ್​​ ಬ್ರಾಡ್ಮನ್​​ ರೆಕಾರ್ಡ್ ಬ್ರೇಕ್​ ಮಾಡಿದ ಕೊಹ್ಲಿ..!

ಪುಣೆ : ಸೌತ್ ಆಫ್ರಿಕಾ ವಿರುದ್ಧ ನಡೆಯುತ್ತಿರುವ ಎರಡನೇ ಟೆಸ್ಟ್​ ಮ್ಯಾಚ್​ನಲ್ಲಿ ಟೀಮ್ ಇಂಡಿಯಾ ಕ್ಯಾಪ್ಟನ್​ ವಿರಾಟ್​ ಕೊಹ್ಲಿ ಕ್ರಿಕೆಟ್​ ದಂತಕಥೆ, ಆಸ್ಟ್ರೇಲಿಯಾದ ಮಾಜಿ ಕ್ಯಾಪ್ಟನ್ ಸರ್​​. ಡೊನಾಲ್ಡ್​ ಬ್ರಾಡ್ಮನ್​ ರೆಕಾರ್ಡ್ ಮುರಿದಿದ್ದಾರೆ.
ಪುಣೆ ಮೈದಾನದಲ್ಲಿ ಡಬಲ್ ಸೆಂಚುರಿ (ಅ.254) ಸಿಡಿಸಿದ ವಿರಾಟ್​ ಕೊಹ್ಲಿ ಒಂದೆಡೆ 7 ಬಾರಿ ಟೆಸ್ಟ್​ನಲ್ಲಿ ಡಬಲ್ ಸೆಂಚುರಿ ಮಾಡಿದ ಭಾರತದ ಮೊದಲ ಆಟಗಾರ ಅನ್ನೋ ಕೀರ್ತಿಗೆ ಪಾತ್ರರಾಗಿದ್ದರೆ, ಇನ್ನೊಂದೆಡೆ ನಾಯಕನಾಗಿ 8 ಬಾರಿ 150ಕ್ಕಿಂತ ಹೆಚ್ಚು ರನ್​ ಸಿಡಿಸಿದ್ದ ಡಾನ್​ ಬ್ರಾಡ್ಮನ್​ ರೆಕಾರ್ಡ್ ಕೂಡ ಮುರಿದಿದ್ದಾರೆ.
50ನೇ ಟೆಸ್ಟ್ ಮ್ಯಾಚ್​ನಲ್ಲಿ ಡಬಲ್ ಸೆಂಚುರಿ ಸಿಡಿಸಿದ ಕೊಹ್ಲಿ ಕ್ಯಾಪ್ಟನ್ ಆಗಿ 9ನೇ ಬಾರಿಗೆ 150 + ರನ್ ಮಾಡಿ ಬ್ರಾಡ್ಮನ್ ದಾಖಲೆ ಬ್ರೇಕ್ ಮಾಡಿದ್ದಾರೆ.
ಆಸೀಸ್ ಮಾಜಿ ಕ್ಯಾಪ್ಟನ್ ಮೈಕಲ್​ ಕ್ಲಾರ್ಕ್​, ಲಂಕಾ ಮಾಜಿ ಕ್ಯಾಪ್ಟನ್ ಮಹೇಲಾ ಜಯವರ್ಧನೆ, ವಿಂಡೀಸ್​ ಮ್ಯಾಜಿ ನಾಯಕ ಲಾರಾ ಹಾಗೂ ಸೌತ್ ಆಫ್ರಿಕಾ ಮಾಜಿ ನಾಯಕ ಗ್ರೇಮ್ ಸ್ಮಿತ್ ತಲಾ ಏಳೇಳು ಬಾರಿ 150+ ಸ್ಕೋರ್ ಮಾಡಿದ್ದಾರೆ.

RELATED ARTICLES

Related Articles

TRENDING ARTICLES