Wednesday, January 15, 2025

‘ಯುವರತ್ನ’ ಅಪ್ಪುಗೆ ‘ಪವರ್​’ಫುಲ್​​ ಎಂಟ್ರಿ..!

ಪವರ್​ ಸ್ಟಾರ್ ಪುನೀತ್ ‘ಪವರ್​’ ಫುಲ್ ಎಂಟ್ರಿ ಕೊಡ್ತಿದ್ದಾರೆ. ಸ್ಯಾಂಡಲ್​ವುಡ್ ‘ರಾಜಕುಮಾರ’ ಅಪ್ಪು ‘ಯುವರತ್ನ’ನಾಗಿ ಮಿಂಚಲು ರೆಡಿಯಾಗಿದ್ದಾರೆ..! ‘ದೊಡ್ಮನೆ ಹುಡುಗ’ನ ಹೊಸ ಗೆಟಪ್​ಗೆ ಫ್ಯಾನ್ಸ್ ಫುಲ್ ಫಿದಾ ಆಗಿದ್ದಾರೆ. ವಿಜಯದಶಮಿ ಸಂಭ್ರಮದಲ್ಲಿ ರಿಲೀಸ್ ಆಗಿರೋ ‘ಟೀಸರ್​ ಸೋಶಿಯಲ್ ಮೀಡಿಯಾದಲ್ಲಿ ಧೂಳೆಬ್ಬಿಸಿದೆ. 
ಪವರ್​ ಸ್ಟಾರ್ ಪುನೀತ್​ ರಾಜ್​ಕುಮಾರ್…ಬಾಲ್ಯದಲ್ಲೇ ಸ್ಯಾಂಡಲ್​ವುಡ್​ನಲ್ಲಿ ಛಾಪು ಮೂಡಿಸಿದ ಸೂಪರ್ ಸ್ಟಾರ್. ಅಪ್ಪು ಸಿನಿಮಾಗಳೇ ಹಾಗೇ ಕ್ಲಾಸ್ ಅಂಡ್ ಮಾಸ್. ಎಲ್ಲಾ ಬಗೆಯ ಆಡಿಯನ್ಸ್​ಗೆ ರೀಚ್​ ಆಗೋ ಮೂವಿ ಮಾಡೋದ್ರಲ್ಲಿ ಅಪ್ಪು ನಂಬರ್ 1. ಪಕ್ಕಾ ಫ್ಯಾಮಿಲಿ ಎಂಟರ್​ಟ್ರೈನರ್ ಆಗಿರೋ ‘ದೊಡ್ಮನೆ ಹುಡುಗ ‘ಯುವರತ್ನ’ನಾಗಿ ಮಿಂಚಲು ರೆಡಿಯಾಗಿದ್ದಾರೆ.
ಸ್ಯಾಂಡಲ್​ವುಡ್​ನ ‘ಅರಸು’ ವರ್ಷದ ಆರಂಭದಲ್ಲಿ, ಅಂದರೆ ಫೆಬ್ರವರಿಯಲ್ಲಿ ‘ನಟಸಾರ್ವಭೌಮ’ನಾಗಿ ಅಭಿಮಾನಿಗಳನ್ನು ರಂಜಿಸಿದ್ದರು. ಈಗ ‘ಯುವರತ್ನ’ನಾಗಿ ಸ್ಫೂರ್ತಿ ತುಂಬಲು ಬರ್ತಿದ್ದಾರೆ. ಈ ಸಿನಿಮಾದಲ್ಲಿ ಚಂದನವನದ ‘ಬಿಂದಾಸ್​’ ಹುಡುಗ ರಗ್ಬಿ ಆಟಗಾರನಾಗಿ ರಾರಾಜಿಸಲಿದ್ದಾರೆ.
ನಿಮ್ಗೆ ಗೊತ್ತೇ ಇದೆ 2017ರಲ್ಲಿ ರಿಲೀಸ್ ಆಗಿದ್ದ ‘ರಾಜಕುಮಾರ’ ಮೂವಿ ಭರ್ಜರಿ ಸಕ್ಸಸ್ ಕಂಡಿತ್ತು. ಬಾಕ್ಸ್​ಆಫೀಸಲ್ಲಿ ಸಖತ್ ಕಲೆಕ್ಷನ್ ಬಾಚಿಕೊಂಡಿತ್ತು. ಚಿಕ್ಕಮಕ್ಕಳಿಂದ ಹಿಡಿದು ವೃದ್ಧರವರೆಗೂ ಪ್ರತಿಯೊಬ್ಬರೂ ‘ರಾಜಕುಮಾರ’ನನ್ನು ಮೆಚ್ಚಿದ್ದರು. ಸಿನಿಮಾ ನೋಡಿದ ಅದೆಷ್ಟೋ ಮಂದಿ ಬದಲಾಗಿದ್ದರು. ಅಪ್ಪ-ಅಮ್ಮ ಕುಟುಂಬದ ಪ್ರೀತಿಯನ್ನು ಸಾರಿ ಸಾರಿ ಹೇಳಿದ್ದ ‘ ರಾಜಕುಮಾರ’ನಿಗೆ ಆ್ಯಕ್ಷನ್ ಕಟ್​ ಹೇಳಿದ್ದು ಸಂತೋಷ್​ ಆನಂದ್ ರಾಮ್. ಇದೇ ಸಂತೋಷ್ ಆನಂದ್​ ರಾಮ್ ಮತ್ತು ಪವರ್ ಸ್ಟಾರ್ ಕಾಂಬಿನೇಷನ್​ನ ಮೂವಿ ‘ಯುವರತ್ನ’.
‘ರಾಜಕುಮಾರ’ ಚಿತ್ರದ ಸಕ್ಸಸ್ ಕಂಡಿರುವ ಚಿತ್ರರಸಿಕರು, ಚಿತ್ರ ವಿಮರ್ಶಕರು ಹಾಗೂ ಎಲ್ಲಕ್ಕಿಂತ ಮುಖ್ಯವಾಗಿ ಸಿನಿಪ್ರಿಯರು, ಅಭಿಮಾನಿಗಳು ‘ಯುವರತ್ನ’ನ ಮೇಲೆ ಸಿಕ್ಕಾಪಟ್ಟೆ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ‘ರಾಜಕುಮಾರ’ ಜೋಡಿಯ ‘ಯುವರತ್ನ’ ಕೂಡ ಕಮಾಲ್ ಮಾಡಲಿದೆ ಅನ್ನೋದು ಟೀಸರ್​ನಿಂದಲೇ ಪಕ್ಕಾ ಆಗಿದೆ.
ದಸರಾ ಹಬ್ಬದ ಸಂಭ್ರಮದಲ್ಲಿ ಅಪ್ಪು ಫ್ಯಾನ್ಸ್​​ಗೆ ‘ಯುವರತ್ನ’ ಟೀಸರ್ ಗಿಫ್ಟ್​ ನೀಡಿದ್ದಾರೆ. ರಗ್ಬಿ ಪ್ಲೇಯರ್ ಆಗಿ ಪವರ್ ಸ್ಟಾರ್ ಕಾಣಿಸಿಕೊಂಡಿದ್ದಾರೆ. ಆಟ-ಓಟ, ಹೊಡೆದಾಟ ಪಂಚಿಂಗ್​ ಡೈಲಾಗ್ ಹೊಂದಿರುವ ಟೀಸರ್ ಕಳೆದೋಗುವಂತಿದೆ. ಅಪ್ಪು ಹೊಸ ಲುಕ್, ಗೆಟಪ್, ಹೇರ್​ಸ್ಟೈಲ್​ಗೆ ಫ್ಯಾನ್ಸ್ ಮನಸೋತಿದ್ದಾರೆ. ಅಪ್ಪು ಡೆಡಿಕೇಶನ್, ಇನ್ವಾಲ್ಮೆಂಟ್​ ಕೂಡ ಮೆಚ್ಚಲೇಬೇಕು.
ಟೀಸರ್​ನಲ್ಲಿ ಅಪ್ಪು ಹೇಳುವ ಡೈಲಾಗ್ ಅಂತು ಈಗ ಸಿಕ್ಕಾಪಟ್ಟೆ ವೈರಲ್ ಆಗ್ತಿದೆ. ”ಈ ದುನಿಯಾದಲ್ಲಿ ಮೂರು ಥರ ಗಂಡಸರು ಇರ್ತಾರೆ. ರೂಲ್​ನ ಫಾಲೋ ಮಾಡೋರು, ರೂಲ್​ನ ಬ್ರೇಕ್ ಮಾಡೋರು ಹಾಗೂ ಮೂರನೇಯವರು ನನ್ ಥರ ರೂಲ್​ ಮಾಡೋರು” ಅನ್ನೋ ಅಪ್ಪು ಪಂಚಿಂಗ್ ಡೈಲಾಗ್​ಗೆ ಫ್ಯಾನ್ಸ್ ಅಂತೂ ಸಖತ್ ಖುಷಿಯಾಗಿದ್ದಾರೆ. ಫ್ರೆಂಡ್ಸ್ ಸರ್ಕಲ್​ನಲ್ಲಿ ಡೈಲಾಗ್ ಹೊಡೆದು ಮಜಾ ಮಾಡ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲೂ ‘ಯುವರತ್ನ’ ಡೈಲಾಗ್ ಹವಾ ಕ್ರಿಯೇಟ್ ಮಾಡಿದೆ.
ಇನ್ನು ‘ಯುವರತ್ನ’ನಿಗೆ ನಾಯಕಿಯಾಗಿ ಕಾಲಿವುಡ್ ನಟಿ ಸಯೇಶಾ ನಟಿಸುತ್ತಿದ್ದಾರೆ. ಸೋನುಗೌಡ ಕೂಡ ಪ್ರಮುಖಪಾತ್ರದಲ್ಲಿದ್ದಾರೆ. ಪ್ರಕಾಶ್ ರಾಜ್​​, ರಾಧಿಕಾ ಶರತ್ ಕುಮಾರ್, ದೂದ್​ ಪೇಡ ದಿಗಂತ್, ಡಾಲಿ ಧನಂಜಯ್​ ಸೇರಿದಂತೆ ದೊಡ್ಡ ತಾರಾಗಣದ ಬಲ ‘ಯುವರತ್ನ’ಗೆ ಸಾಥ್ ನೀಡಿದೆ. ಎಸ್​. ತಮನ್​​ ಮ್ಯೂಸಿಕ್ ನೀಡಿದ್ದಾರೆ. ವೆಂಕಟೇಶ್ ಅಂಗುರಾಜ್ ಕ್ಯಾಮರಾ ಕೈಚಳಕ ತೋರಿಸಿದ್ದಾರೆ. ಸ್ಟಾರ್ ಪ್ರೊಡ್ಯೂಸರ್ ವಿಜಯ್ ಕಿರಗಂದೂರ್ ‘ಯುವರತ್ನ’ಗೆ ಬಂಡವಾಳ ಹಾಕಿದ್ದಾರೆ.
ಟೈಟಲ್ ಅನೌನ್ಸ್ ಆದಲ್ಲಿಂದಲೂ ಸಖತ್ ಸದ್ದು ಮಾಡ್ತಿರುವ ‘ಯುವರತ್ನ’ ಟೀಸರ್ ರಿಲೀಸ್ ಬಳಿಕ ಹುಚ್ಚೆಬ್ಬಿಸಿದೆ. ಇಡೀ ಸ್ಯಾಂಡಲ್​ವುಡ್ ‘ಯುವರತ್ನ’ನಿಗೆ ಕಾಯ್ತಿದ್ದು, ಸದ್ಯದಲ್ಲೇ ಟ್ರೈಲರ್ ಬಿಡುಗಡೆ ಮಾಡಲಿರುವ ಸಿನಿತಂಡ ಸಿನಿಮಾ ರಿಲೀಸ್ ಡೇಟ್​ ಕೂಡ ಅನೌನ್ಸ್ ಮಾಡಲಿದೆ.

RELATED ARTICLES

Related Articles

TRENDING ARTICLES