ವಿಶಾಖಪಟ್ಟಣ : ಕ್ರಿಕೆಟ್ ಜಗತ್ತು ಕೌತುಕಗಳ ಆಗರ. ಇಲ್ಲಿ ಸಾಕಷ್ಟು ದಾಖಲೆಗಳು ನಿರ್ಮಾಣವಾಗುತ್ತಲೇ ಇರುತ್ತವೆ. ಅದೆಷ್ಟೋ ದಾಖಲೆಗಳು ಇಂದಿಗೂ ಬ್ರೇಕ್ ಆಗಿಲ್ಲ…ಮುಂದೆ ಕೂಡ ಬ್ರೇಕ್ ಆಗುವುದು ಕಷ್ಟ..! ಕ್ರಿಕೆಟ್ ಎಂಬ ವರ್ಣ ರಂಜಿತ ಆಟದಲ್ಲಿ ಪ್ರತಿಯೊಂದು ಮ್ಯಾಚ್ನಲ್ಲೂ ಒಂದಲ್ಲ ಒಂದು ರೆಕಾರ್ಡ್ಗಳು ಪುಸ್ತಕದಲ್ಲಿ ದಾಖಲಾಗುತ್ತಲೇ ಇರುತ್ತವೆ. ಅಂತೆಯೇ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಮೊದಲ ಟೆಸ್ಟ್ನಲ್ಲೂ ಅನೇಕ ದಾಖಲೆಗಳು ನಿರ್ಮಾಣವಾಗಿದ್ದು, ವೇಗಿ ಮೊಹಮ್ಮದ್ ಶಮಿ ವಿಶೇಷ ರೆಕಾರ್ಡ್ವೊಂದನ್ನು ಮಾಡಿದ್ದಾರೆ.
ಹೌದು, ವಿಶಾಖಪಟ್ಟಣದ ಡಾ.ವೈಎಸ್ ರಾಜಶೇಖರ್ ರೆಡ್ಡಿ ಕ್ರೀಡಾಂಗಣದಲ್ಲಿ ನಡೆದ ಮ್ಯಾಚ್ನಲ್ಲಿ ಭಾರತದ ಎರಡನೇ ಇನ್ನಿಂಗ್ಸ್ನಲ್ಲಿ ಶಮಿ 5 ವಿಕೆಟ್ ಕಿತ್ತು ಮಿಂಚಿದರು. ಈ ಮೂಲಕ 1996ರ ಬಳಿಕ ಭಾರತದಲ್ಲಿ ಟೆಸ್ಟ್ ಪಂದ್ಯದ 4ನೇ ಇನ್ನಿಂಗ್ಸ್ನಲ್ಲಿ 5 ವಿಕೆಟ್ ಕಿತ್ತ ಸಾಧನೆ ಮಾಡಿದ ಬೌಲರ್ ಎನಿಸಿಕೊಂಡಿದ್ದಾರೆ. 1996ರಲ್ಲಿ ಜಾವಗಲ್ ಶ್ರೀನಾಥ್ ಸೌತ್ ಆಫ್ರಿಕಾ ವಿರುದ್ಧದ ಮ್ಯಾಚ್ನಲ್ಲಿ 4ನೇ ಇನ್ನಿಂಗ್ಸ್ನಲ್ಲಿ 6 ವಿಕೆಟ್ ಪಡೆದಿದ್ದರು, ಅಂತೆಯೇ ಲ್ಯಾನ್ಸ್ ಕ್ಲುಸ್ನೆರ್ 64 ರನ್ಗಳಿಗೆ 8 ವಿಕೆಟ್ ಕಿತ್ತಿದ್ದರು. ಆ ಬಳಿಕ ಯಾರೂ ಈ ಸಾಧನೆ ಮಾಡಿರ್ಲಿಲ್ಲ.
1996ರಲ್ಲಿ ಕನ್ನಡಿಗ ಜಾವಗಲ್ ಶ್ರೀನಾಥ್ – 2019ರಲ್ಲಿ ಮೊಹಮ್ಮದ್ ಶಮಿ..!
TRENDING ARTICLES