ರಾಜ್ಯಕ್ಕೆ ನೆರೆ ಪರಿಹಾರ ನೀಡಿ ಅಂತ ಕೇಂದ್ರ ಸರ್ಕಾರವನ್ನು ಕೇಳಿದ್ದಕ್ಕೆ ಬಿಜೆಪಿ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ಗೆ ಬಿಜೆಪಿ ಶೋಕಾಸ್ ನೋಟಿಸ್ ಜಾರಿ ಮಾಡಿದೆ.
ಕೇಂದ್ರ ಸರ್ಕಾರದಿಂದ ನೆರೆ ಪರಿಹಾರ ಬಿಡುಗಡೆ ಮಾಡಿಸಿಕೊಂಡು ಬರುವಲ್ಲಿ ರಾಜ್ಯದ 25 ಬಿಜೆಪಿ ಸಂಸದರು ನಿರ್ಲಕ್ಷ್ಯ ತೋರ್ತಿದ್ದಾರೆ. ಪ್ರಧಾನಿ ಮೋದಿಯವರು ರಾಜ್ಯದ ಬಗ್ಗೆ ಗಂಭೀರವಾಗಿ ಆಲೋಚಿಸಬೇಕಿದೆ. ನಮ್ಮದು ಪ್ರಜಾಪಂತ್ರ ದೇಶ. ಯಾರಿಗೂ ಕೂಡ ಹೆದರುವ ಅವಶ್ಯಕತೆ ಇಲ್ಲ. ಮೋದಿ ಯಾರನ್ನೂ ಭಯ ಪಡಿಸಲ್ಲ. ಅವರು ಗುಜರಾತ್ ಸಿಂ ಆಗಿದ್ದವರು. ಈಗ ಪ್ರಧಾನಿಯಾಗಿದ್ದಾರೆ. ಸಂಸದರು ಮೌನ ಮುರಿಯಬೇಕು. ಪ್ರಧಾನಿ ಭೇಟಿಗೆ ಸಮಯ ನಿಗದಿ ಪಡಿಸಲಿ ಅಂತ ಒತ್ತಾಯಿಸಿದ್ದರು.
ಅನಂತ್ಕುಮಾರ್ರವರು ಕೇಂದ್ರ ಮತ್ತು ರಾಜ್ಯ ಸರ್ಕಾರದ ಮಧ್ಯೆ ಸೇತುವೆ ಆಗಿದ್ದರು. ಅವರಿಂದು ಬದುಕಿದ್ದರೆ ಈ ಸ್ಥಿತಿ ಬರ್ತಿರ್ಲಿಲ್ಲ ಎಂದಿದ್ದ ಯತ್ನಾಳ್ ಹಾಲಿ ಸ್ವಪಕ್ಷದ ಸಂಸದರ ವಿರುದ್ಧ ಹರಿಹಾಯ್ದಿದ್ದರು, ನೆರೆ ಪರಿಹಾರಕ್ಕಾಗಿ ಯತ್ನಾಳ್ ಹೀಗೆ ಧ್ವನಿ ಎತ್ತಿದ್ದೇ ಮಹಾಪರಾಧ ಆಯ್ತಾ? ನೆರೆ ಪರಿಹಾರದ ಬಗ್ಗೆ ವಾಸ್ತವ ನೆಲೆಗಟ್ಟಲ್ಲಿ ಮಾತನಾಡಿದ ಅವರಿಗೆ ಬಿಜೆಪಿ ನೋಟಿಸ್ ಜಾರಿ ಮಾಡಿದೆ.
ನೆರೆ ಪರಿಹಾರ ಕೇಳಿದ್ದೇ ತಪ್ಪಾಯ್ತಾ? – ಯತ್ನಾಳ್ಗೆ ನೋಟಿಸ್..!
TRENDING ARTICLES