ವಿಶಾಖಪಟ್ಟಣದಲ್ಲಿ ನಡೆಯುತ್ತಿರುವ ಸೌತ್ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್ನಲ್ಲಿ ಟೀಮ್ ಇಂಡಿಯಾದ ಯಂಗ್ ಪ್ಲೇಯರ್, ಕನ್ನಡಿಗ ಮಯಾಂಕ್ ಅಗರ್ವಾಲ್ ಮಿಂಚಿದ್ದಾರೆ. ಡಬಲ್ ಸೆಂಚುರಿ (215)ರನ್ ಸಿಡಿಸಿರುವ ಅಗರ್ವಾಲ್ ಆಟಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗ್ತಿದೆ. ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಕನ್ನಡಿಗನ ಆಟಕ್ಕೆ ಶಹಬ್ಬಷ್ ಅಂದಿದ್ದಾರೆ.
ಅಗರ್ವಾಲ್ ಒಂದೊಳ್ಳೆ ಸೆಂಚುರಿ ಬಾರಿಸಿದ್ದಾರೆ. ಆಸ್ಟ್ರೇಲಿಯಾ ವಿರುದ್ಧ ಪದಾರ್ಪಣೆ ಮಾಡಿದಲ್ಲಿಂದಲೂ ಅವರು ಒಳ್ಳೆಯ ಎಫಾರ್ಟ್ ಹಾಕ್ತಿದ್ದಾರೆ ಅಂತ ಹೇಳಿರುವ ಸಚಿನ್, ಮಯಾಂಕ್ ಅವರ ಪರಿಶ್ರಮದ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿರುವುದಲ್ಲದೆ ರೋಹಿತ್ ಮತ್ತು ಅಗರ್ವಾಲ್ ಜೊತೆಯಾಟವನ್ನೂ ಪ್ರಶಂಸಿಸಿದ್ದಾರೆ.
A good century by Mayank Agarwal. He has worked hard since his debut in Australia.
The opening partnership between him & Rohit Sharma has been a joy to watch.#INDvSA pic.twitter.com/o1Z0A4uuwq— Sachin Tendulkar (@sachin_rt) October 3, 2019