Wednesday, January 15, 2025

ರಾಹುಲ್​ ದ್ರಾವಿಡ್ ರೆಕಾರ್ಡ್​ ಸರಿಗಟ್ಟಿದ ರೋಹಿತ್​ ಶರ್ಮಾ..!

ವಿಶಾಖಪಟ್ಟಣ : ಹಿಟ್​ ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾ ಟೀಮ್ ಇಂಡಿಯಾ ಮಾಜಿ ಕ್ಯಾಪ್ಟನ್ ರಾಹುಲ್ ದ್ರಾವಿಡ್​ರವರ ರೆಕಾರ್ಡೊಂದನ್ನು ಸರಿಗಟ್ಟಿದ್ದಾರೆ.
ದಕ್ಷಿಣ ಆಫ್ರಿಕಾ ವಿರುದ್ಧ ನಡೆಯುತ್ತಿರುವ ಮೊದಲ ಟೆಸ್ಟ್​ನಲ್ಲಿ 176ರನ್ ಬಾರಿಸಿ ಮಿಂಚಿದ ಶರ್ಮಾ 1997-1998ರ ಅವಧಿಯಲ್ಲಿ ರಾಹುಲ್ ದ್ರಾವಿಡ್ ನಿರ್ಮಿಸಿದ್ದ ದಾಖಲೆಯ ಸಮಕ್ಕೆ ಬಂದಿದ್ದಾರೆ. ದ್ರಾವಿಡ್ ಸತತ 6 ಬಾರಿ ಟೆಸ್ಟ್​​ ಅರ್ಧಶತಕ ಬಾರಿಸಿದ್ದ ದಾಖಲೆಯನ್ನು ಹೊಂದಿದ್ದರು. ಇಂದಿನ ಶತಕದೊಂದಿಗೆ ರೋಹಿತ್ ಶರ್ಮಾ ಕೂಡ ಟೆಸ್ಟ್​ನಲ್ಲಿ ಸತತ 6 ಅರ್ಧಶತಕದ ಗಡಿ ದಾಟಿದ ಸಾಧನೆ ಮಾಡಿದ್ದಾರೆ.
ಇನ್ನು ಟೆಸ್ಟ್​ನಲ್ಲಿ ಮೊದಲ ಬಾರಿಗೆ ಆರಂಭಿಕರಾಗಿ ಕಣಕ್ಕಿಳಿದ ರೋಹಿತ್ ಶರ್ಮಾ ಟೆಸ್ಟ್ ಕ್ರಿಕೆಟ್​ಗೆ ಸಂಬಂಧಿಸಿದಂತೆ ತಮ್ಮ ವಿರುದ್ಧ ಕೇಳಿಬಂದಿದ್ದ ಎಲ್ಲಾ ಟೀಕೆಗಳಿಗೂ ಬ್ಯಾಟ್​​ ಮೂಲಕವೇ ಖಡಕ್ ಉತ್ತರ ನೀಡಿದ್ದಾರೆ.

RELATED ARTICLES

Related Articles

TRENDING ARTICLES